ಪೈಕ: ಒಡಿಯೂರು ಗ್ರಾಮ‌ವಿಕಾಸ ಘಟ ಸಮಿತಿ ವತಿಯಿಂದ ಸ್ವಚ್ಚತೆ

ಗುತ್ತಿಗಾರು: ಒಡಿಯೂರು ಶ್ರೀ ಗ್ರಾಮ ವಿಕಾಸ ಗುತ್ತಿಗಾರು ಘಟ ಸಮಿತಿ, ಗ್ರಾಮ ಪಂಚಾಯತ್ ಗುತ್ತಿಗಾರು, ಆರೋಗ್ಯ ಇಲಾಖೆ ಗುತ್ತಿಗಾರು, ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವಿಪತ್ತು ನಿರ್ವಹಣಾ ಘಟಕ ಸಮಿತಿ ಗುತ್ತಿಗಾರು, ಶಾಲಾ ಮೇಲುಸ್ತುವರಿ ಸಮಿತಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೈಕ ಶಾಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆ.03 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೈಕದಲ್ಲಿ ಶ್ರಮದಾನ ಹಾಗೂ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಒಡಿಯೂರು ಗ್ರಾಮ ವಿಕಾಸದ ಗುತ್ತಿಗಾರು ಘಟ ಸಮಿತಿಯ ಒಕ್ಕೂಟದ ಅಧ್ಯಕ್ಷರಾದ ಜಯರಾಮ ಪೈಕ, ಉಪಾಧ್ಯಕ್ಷೆ ಶ್ರೀದೇವಿ ಕೊಂಬೊಟ್ಟು, ಸೇವಾ ದೀಕ್ಷಿತೆ ಪೂರ್ಣಿಮಾ, ಶಾಲಾ ಮುಖ್ಯಶಿಕ್ಷಕಿ ಸ್ನೇಹಲತಾ ಹಾಗೂ ಊರವರು ಹಾಗೂ ಪೋಷಕರು ಭಾಗವಹಿಸಿದ್ದರು