ಗುತ್ತಿಗಾರು.ಆ.04: ವಿದ್ಯುತ್ ಲೈನ್ ದುರಸ್ತಿ ಮಾಡುತ್ತಿದ್ದಾಗ ಮೆಸ್ಕಾಂ ಪವರ್ ಮ್ಯಾನ್ ಗೆ ಶಾಕ್ ತಗುಲಿ ಜಖಂಗೊಂಡ ಘಟನೆ ಎಲಿಮಲೆ ಸಮೀಪದ ಜಬಳೆ ಎಂಬಲ್ಲಿ ನಡೆದಿದೆ. ಗಾಯಾಳುವನ್ನು ಸತೀಶ್ ಎಂದು ಗುರುತಿಸಲಾಗಿದೆ.
ಲೈನ್ ದುರಸ್ತಿ ವೇಳೆ ಶಾಕ್ ತಗುಲಿ ಕಂಬದಿಂದ ಕೆಳಗೆ ಬಿದ್ದು ಗಾಯಗೊಂಡ ಅವರನ್ನು ಸ್ಥಳೀಯರು ಅವರನ್ನು ಸುಳ್ಯದ ಕೆ. ವಿ.ಜಿ. ತಂದು ದಾಖಲಿಸಿರುವುದಾಗಿ ತಿಳಿದುಬಂದಿದೆ. ಸ್ಥಳೀಯರಾದ ಗಣೇಶ್, ವಸಂತ ಹಾಗೂ ಆಕಾಶ್ ಎಲಿಮಲೆ ಎಲಿಮಲೆಯಲ್ಲಿರುವ ವೈಧ್ಯರ ಬಳಿ ಕರೆದೊಯ್ದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸತೀಶ್ ಅವರ ಕೈ ಹಾಗೂ ಸೊಂಟದ ಭಾಗಕ್ಕೆ ಗಾಯವಾಗಿದೆ ಎನ್ನಲಾಗಿದೆ