ಕೈಕಂಬ: ಯುವಕ ಮಂಡಲ ವಾರ್ಷಿಕ ಮಹಾಸಭೆ| ಅಧ್ಯಕ್ಷರಾಗಿ ಪ್ರದೀಪ್ ಕಳಿಗೆ ಕಾರ್ಯದರ್ಶಿಯಾಗಿ ರಕ್ಷಿತ್ ಭ್ರಾಂತಿಕೊಚ್ಚಿ ಆಯ್ಕೆ

ಸುಬ್ರಹ್ಮಣ್ಯ: ಯುವಕ ಮಂಡಲ ಕೈಕಂಬ(ರಿ), ಇದರ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಇಂದು(ಜು. 26) ನಡೆಯಿತು. ಇಂದಿನ ಸಭೆಯಲ್ಲಿ ಈ ಸಾಲಿನ ನೂತನ ಆಡಳಿತ ಮಂಡಳಿ ಅನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಪ್ರದೀಪ್ ಕಳಿಗೆ , ಉಪಾಧ್ಯಕ್ಷರಾಗಿ ತಿಲಕ್ ಕೋಟೆಬಾಗಿಲು ಹಾಗೂ ಕಾರ್ಯದರ್ಶಿಯಾಗಿ ರಕ್ಷಿತ್ ಬ್ರಾಂತಿಕೊಚ್ಚಿ ಆಯ್ಕೆಯಾಗಿದ್ದಾರೆ. ಜತೆ ಕಾರ್ಯದರ್ಶಿಯಾಗಿ ಜಾಗೃತ್ ಕಳಿಗೆ, ಕೋಶಾಧಿಕಾರಿಯಾಗಿ ಸುಧೀರ್ ಕುಮಾರಕೃಪಾ ಆಯ್ಕೆಯಾದರು. ಸಭೆಯಲ್ಲಿ ಯುವಕ ಮಂಡಲದ ಹಿರಿಯರಾದ ವಿಜಯ ಕುಮಾರ್ ನಡುತೋಟ, ಪ್ರವೀಣ್ ಪಿಲಿಕಜೆ, ಪೂರ್ವಾಧ್ಯಕ್ಷರಾದ ಶಿವಪ್ರಸಾದ್ ನಡುತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.