ನಿವೃತ್ತ ಆರೋಗ್ಯಾಧಿಕಾರಿ ಡಾ. ನಂದಕುಮಾರ್ ಗೆ ಪುತ್ರ ವಿಯೋಗ| ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಆಸ್ತಿಕ್

ಸುಳ್ಯ: ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ರವರ ಪುತ್ರ , ಮಂಗಳೂರಿನ ಎ.ಬಿ.ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ ದಂತ ವಿಜ್ಞಾನ ಕಲಿಯುತ್ತಿದ್ದ ಆಸ್ತಿಕ್ ರಾಘವ್ ಇಂದು ಕೇರಳದ ಕಣ್ಣೂರಿನಲ್ಲಿ ಕೆರೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ

ಮಂಗಳೂರಿನಿಂದ ತನ್ನ ಸಹಪಾಠಿಯೊಂದಿಗೆ ಕೇರಳದ ಕಣ್ಣೂರಿನ ಆತನ ಮನೆಗೆ ಆಸ್ತಿಕ್ ಇಂದು ಬೆಳಿಗ್ಗೆ ಹೋಗಿದ್ದರೆನ್ನಲಾಗಿದೆ. ಬಳಿಕ ಅವರು ಮನೆ ಪಕ್ಕದ ಕೆರೆಗೆ ಸ್ನಾನಕ್ಕೆ ಹೋದಾಗ ಕಾಲು ಜಾರಿ ನೀರಲ್ಲಿ ಮುಳುಗಲ್ಪಟ್ಟು ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.