ವಳಲಂಬೆ: ಮನೆಯೊಳಗೆ ನುಗ್ಗಿದ ನಾಗರ ಕಾಡಿಗೆ

ಗುತ್ತಿಗಾರು: ಮನೆಯೊಂದಕ್ಕೆ ನುಗ್ಗಿದ ನಾಗರ ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ ಇಲ್ಲಿನ ವಳಲಂಬೆಯಲ್ಲಿ ನಡೆದಿದೆ.

ವಳಲಂಬೆ ಶಂಕರ ಭಟ್ ರವರ ಮನೆಯಲ್ಲಿ ಜು.13 ರ ರಾತ್ರಿ ನಾಗರ ಹಾವೊಂದು ಕಂಡು ಬಂದಿದ್ದು, ಮನೆಯಲ್ಲಿ ಹಾವು ಇರುವುದರಿಂದ ಗಾಬರಿಗೊಂಡ ಮನೆಯವರು ಸ್ಥಳೀಯರಿಗೆ ತಿಳಿಸಿದ್ದು ಬಳಿಕ ಪಂಜ ಅರಣ್ಯ ಇಲಾಖೆಗೆ ತಿಳಿಸಲಾಯಿತು. ತಕ್ಷಣ ಸ್ಪಂದಿಸಿದ ಇಲಾಖೆಯವರು ಉರಗ ತಜ್ಞ ತಿಮ್ಮಪ್ಪ ಪಂಜ ರ ಮೂಲಕ ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.