ಸುಳ್ಯ : ಅಜ್ಜಾವರದಲ್ಲಿ ಮಕ್ಕಳ ಹಕ್ಕುಗಳ  ಅರಿವು ಕಾರ್ಯಕ್ರಮ

ಅಜ್ಜಾವರ ಸರಕಾರಿ ಪ್ರೌಢ ಶಾಲೆಯಲ್ಲಿ ಜೂ.30 ಸೋಮವಾರ ಅಪರಾಹ್ನ 2 ಗಂಟೆಗೆ. ಶಾಲಾ ಮುಖ್ಯ ಶಿಕ್ಷಕರಾದ ಗೋಪಿನಾಥ್ ರವರ ಅಧ್ಯಕ್ಷತೆಯಲ್ಲಿ ಮಕ್ಕಳ ಹಕ್ಕುಗಳ  ಅರಿವು ಕಾರ್ಯಕ್ರಮ  ನಡೆಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಖೀ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಇದರ ಆಡಳಿತಾಧಿಕಾರಿ ಪ್ರಿಯಾ ರಾಜಮೋಹನ್ 

ಭಾಗವಹಿಸಿದ್ದರು.

ಮಕ್ಕಳ ಹಕ್ಕುಗಳು,ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳು. ಪೋಕ್ಸೋ ಕಾಯಿದೆ, ಮಕ್ಕಳ ಸಹಾಯವಾಣಿ

ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಎಸ್ ಡಿಎಂಸಿ ಅಧ್ಯಕ್ಷರಾದ ಪ್ರಕಾಶ್ ಕನೆಮಾರಡ್ಕ ಉಪಾಧ್ಯಕ್ಷರಾದ ಶೌಕತ್ ಅಲಿ. ಸದಸ್ಯರಾದ ಜನಾರ್ಧನ, ದಾಮೋದರ ಕೆ. ಶಾಲಾ ಮಕ್ಕಳ ಸುರಕ್ಷತಾ ಸಮಿತಿ.    ಸದಸ್ಯರಾದ ವಸಂತಿ, ಯಶೋಧ, ಗ್ರಂಥಪಾಲಕಿ ಸುಜಾತ ಕನೆಮಾರಡ್ಕ ಅತಿಥಿಗಳಾಗಿ ಉಪಸ್ಥಿತರಿದ್ದರು. 

ಶಾಲಾ ವಿದ್ಯಾರ್ಥಿಗಳು ಮತ್ತು  ಶಿಕ್ಷಕರು  ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾ ಶಂಕರಿ ಶಿಕ್ಷಕಿ ಎಲ್ಲರನ್ನೂ ಸ್ವಾಗತಿಸಿ,

ಮುಖ್ಯ ಶಿಕ್ಷಕರಾದ ಗೋಪಿನಾಥ್ ರವರು  ಸರ್ವರನ್ನು ವಂದಿಸಿದರು.