ಗುತ್ತಿಗಾರು: ಕಾರು-ಬೈಕ್ ಡಿಕ್ಕಿ ಸವಾರರಿಗೆ ಗಾಯ

ಗುತ್ತಿಗಾರಿನಲ್ಲಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಮೇ.20 ರಂದು ಸಂಜೆ ನಡೆದಿದೆ.

ಬೈಕ್ ಸವಾರನಿಗೆ ಗಾಯವಾಗಿದ್ದು, ಬೈಕ್ ನಲ್ಲಿದ್ದ ದೀಪಕ್ ರ ತಂಗಿಗೂ ಅಲ್ಪ ಗಾಯವಾಗಿದೆ. ಗುತ್ತಿಗಾರು ಕಡೆ ಬರುತಿದ್ದ ಹರೀಶ್ ಉಬರಡ್ಕ ಅವರ ಕಾರು ಮತ್ತು ಪೆಟ್ರೋಲ್ ಬಂಕ್ ನಿಂದ ಹೊರಟು ಮೇಲಿನ ಪೇಟೆ ಕಡೆ ಹೊರಟ ದೀಪಕ್ ಚಿಲ್ಪಾರು ಎಂಬವರ ಬೈಕ್ ಪರಸ್ಪರ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.