ಅರಂತೋಡು: ತೋಟಕ್ಕೆ ನೀರು ಬಿಡಲು ತೆರಳಿದ ಕೃಷಿಕ ವಿದ್ಯುದಾಘಾತಕ್ಕೆ ಬಲಿ

ಅರಂತೋಡು: ನೀರು ಬಿಡಲು ತೋಟಕ್ಕೆ ಹೋದ ಕೃಷಿಕರೊಬ್ಬರು ವಿದ್ಯುತ್ ಶಾಕ್ ತಗುಲಿ‌ ಜೀವ ಕಳೆದುಕೊಂಡ ಘಟನೆ ಅರಂತೋಡಿನಿಂದ ವರದಿಯಾಗಿದೆ.

ಅರಂತೋಡಿನ ಉಳುವಾರು ಮನೆತನದ ಆಟೋರಿಕ್ಷಾ ಚಾಲಕರಾಗಿರುವ ಬಿಳಿಯಾರಿನ ಪುರುಷೋತ್ತಮ ಎಂಬವರು ವಿದ್ಯುದಾಘಾತಕ್ಕೆ ಒಳಗಾದವರು. ಅವರನ್ನು ಕೂಡಲೇ ಅಂಬ್ಯುಲೆನ್ಸ್ ನಲ್ಲಿ ಕೆ.ವಿ.ಜಿ. ಆಸ್ಪತ್ರೆಗೆ ತರಲಾಗಿದೆ. ವೈದ್ಯರು ಸಾವನ್ನು ದೃಢಪಡಿಸಿರುವುದಾಗಿ ತಿಳಿದುಬಂದಿದೆ.