ಮಕ್ಕಳೊಂದಿಗೆ ಡ್ಯಾನ್ಸ್ ಮಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ

ಪಂಜ: ಮಕ್ಕಳೊಂದಿಗ ಕನ್ನಡ ಹಾಡಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಡ್ಯಾನ್ಸ್ ಮಾಡಿ ಮಕ್ಕಳನ್ನು ರಂಜಿಸಿದ್ದಾರೆ.

ಕ್ರಿಯೇಟಿವ್ ಚಿತ್ರಕಲಾ ಶಾಲೆ ಪಂಜ ಇದರ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಪಂಜ, ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಹಾಗೂ ಕಲಾಮಂದಿರ ಡ್ಯಾನ್ಸ್ ಕ್ರೂ ಪಂಜ ಇವುಗಳ ಸಹಕಾರದೊಂದಿಗೆ ಪಂಜದ ಉತ್ಕರ್ಷ ಸಹಕಾರಿ ಸೌಧದಲ್ಲಿ ನಡೆಯುತ್ತಿರುವ ನಲಿ-ಕಲಿ ಮಕ್ಕಳ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಸಂಪನ್ಮೂಲ ವ್ಯಕ್ತಿ ವಂದನಾ ರೈ ಕಾರ್ಕಳ ಹಾಗೂ ಮಕ್ಕಳೊಂದಿಗೆ ಅಭಿನಯ ಗೀತೆಗೆ ಹೆಜ್ಜೆ ಹಾಕುವುದರ ಜೊತೆಗೆ ಹಾಡು ಕೂಡ ಹಾಡುವ ಮೂಲಕ ಹಾಡಿ ಕುಣಿದು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಕ್ಕಳಿಗೆ ಹಾಡೊಂದನ್ನು ಹೇಳಿಕೊಟ್ಟರು, ಅಲ್ಲದೆ ಕನ್ನಡದ ಹಾಡಿಗೆ ಮಕ್ಕಳ ಜೊತೆ ಡ್ಯಾನ್ಸ್ ಕೂಡ ಮಾಡಿದ್ದಾರೆ.