ಸುಳ್ಯ: ಇಲ್ಲಿನ ಖಾಸಗಿ ಕಾಲೇಜು ಕ್ಯಾಂಪಸ್ ಬಳಿ ವಿದ್ಯಾರ್ಥಿನಿಯೋರ್ವಳಿಗೆ ಕಜ್ಜಾಯ(ಉಣ್ಣಿಅಪ್ಪ) ತಂದು ಕೊಟ್ಟ ಯುವಕನೋರ್ವನಿಗೆ ಸ್ಥಳೀಯ ಯುವಕರು ಬಿಸಿ ಬಿಸಿ ಗೂಸಾ ನೀಡಿದ ಘಟನೆ ವರದಿಯಾಗಿದೆ.
ಕಾಲೇಜು ಮುಗಿಸಿ ಹಾಸ್ಟೆಲ್ ಗೆ ತೆರಳಿದ್ದ ವಿದ್ಯಾರ್ಥಿನಿಗೆ ಆಕೆಯ ಕಾಲೇಜು ಸಹಪಾಠಿ ಎನ್ನಲಾದ ಯುವಕನೋರ್ವ ತಿಂಡಿ ತಂದು ಕೊಟ್ಟಿದ್ದ ಎಂದು ಹೇಳಲಾಗಿದ್ದು, ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ಕರೆಸಿ ವಿಚಾರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಆತ ಅನ್ಯಕೋಮಿನವನಾಗಿದ್ದರೂ ಹಿಂದೂ ಹೆಸರು ಹೇಳಿದ್ದು ನೆರೆದವರ ಕೋಪಕ್ಕೆ ಕಾರಣವಾಗಿದೆ. ಇದಕ್ಕಾಗಿ ಆತನಿಗೆ ಬಿಸಿಬಿಸಿ ಗೂಸಾ ನೀಡಿದ್ದಾರೆ.
ಈ ವೇಳೆ ಹಲವರು ಸ್ಥಳದಲ್ಲಿ ಜಮಾಯಿಸಿದ್ದು, ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ ವೇಳೆ ಘಟನಾ ಸ್ಥಳದಲ್ಲಿದ್ದವರು ಕಾಲ್ಕಿತ್ತಿದ್ದಾರೆ ಎಂದು ತಿಳಿದುಬಂದಿದೆ.