ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಪ್ರದಾಯದ ಪ್ರಕಾರ ಬಿಸು ಕಣಿ ಮತ್ತು ಸೌರಮಾನ ಯುಗಾದಿಯನ್ನು ಸೋಮವಾರ(ಎ.14) ಆಚರಿಸಲಾಯಿತು. ಬಿಸು ಹಬ್ಬದ ಅಂಗವಾಗಿ ಕುಕ್ಕೆ ದೇವಳದಲ್ಲಿ ಬಿಸು ಕಣಿಯನ್ನು ದೇವರಿಗೆ ದರ್ಶನ ಮಾಡಲಾಯಿತು. ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಬಿಸು ರಥೋತ್ಸವ ನಡೆಯಿತು.
ರಾಜಬೀದಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿಕ್ಕರಥೋತ್ಸವ ನೆರವೇರಿತು. ರಥೋತ್ಸವದ ಬಳಿಕ ದೇವಳದ ಹೊರಾಂಗಣದಲ್ಲಿರುವ ದ್ವಾದಶಿ ಮಂಟಪದಲ್ಲಿ ಪೂಜೆ ನೆರವೇರಿತು. ದೇವರ ದರ್ಶನ ಮತ್ತು ಸೇವೆಗಳು ಉತ್ಸವದ ನಂತರ ಆರಂಭವಾದವು.
ಭಾನುವಾರ ರಾತ್ರಿ ಮಹಾಪೂಜೆಯ ನಂತರ ವಿಷು ಪ್ರಯುಕ್ತ ದೇವರಿಗೆ ವಿಶೇಷ ಪಾಲಕಿ ಮತ್ತು ಬಂಡಿ ರಥೋತ್ಸವ ನೆರವೇರಿತು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಭಕ್ತರು ಭಾಗವಹಿಸಿದ್ದರು.