ಸುಳ್ಯ: ಕಾನೂನುಬಾಹಿರ ಮದ್ಯ ಸಾಗಾಟ; ಪ್ರಕರಣ ದಾಖಲು

ಸುಳ್ಯ: ಕಾನೂನು ಬಾಹಿರವಾಗಿ ಮದ್ಯ ಸಾಗಾಟ ನಡೆಸಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

ಎ.10ರಂದು ಸುಳ್ಯ ಎಸೈ ಅವರು ಗಸ್ತು ತಿರುಗುತ್ತಿದ್ದ ವೇಳೆ ಮಂಡೆಕೋಲು ಪೇಟೆಯಲ್ಲಿನ ಬಾರ್‌ಆಂಡ್‌ ರೆಸ್ಟೂರೆಂಟ್‌ ಬಳಿ ಮೋಟಾರ್‌ಸೈಕಲ್‌ ನ ಪೆಟ್ರೋಲ್‌ ಟ್ಯಾಂಕ್‌ ಮೇಲೆ ಖಾಕಿ ಬಣ್ಣದ ರಟ್ಟಿನ ಬಾಕ್ಸ್ ನ್ನು ಇಟ್ಟುಕೊಂಡು ಒಬ್ಬ ವ್ಯಕ್ತಿ ತನ್ನ ಮೋಟಾರ್‌ಸೈಕಲ್‌ನಲ್ಲಿ ಕುಳಿತುಕೊಂಡು ಹೊರಡುತ್ತಿರುವುದನ್ನು ಗಮನಿಸಿದ ಪೊಲೀಸರು ಮೋಟಾರ್‌ಸೈಕಲ್‌ ಬಳಿ ಹೋಗಿ ನೋಡಿದಾಗ ತೆರೆದ ರಟ್ಟಿನ ಬಾಕ್ಸ್ ಒಳಗೆ ಮದ್ಯ ತುಂಬಿದ ವಿಸ್ಕಿ ಬಾಟಿÉಗಳು ಹಾಗೂ ಬಿಯರ್‌ಬಾಟ್ಲಿಗಳು ಇರುವುದು ಕಂಡು ಬಂದಿದ್ದು, ಈ ಬಗ್ಗೆ ವಿಚಾರಿಸಿದಾಗ ತಾನು ಮಂಡೆಕೋಲು ಬಾರ್‌ಆಂಡ್‌ ರೆಸ್ಟೋರೆಂಟ್‌ ನಿಂದ ಖರೀದಿಸಿರುವುದಾಗಿ ತಿಳಿಸಿದ್ದು, ಕಾನೂನು ಬಾಹಿರವಾಗಿ ಕಾನೂನಿಗೆ ಮಿತಿ ಮೀರಿ ಮದ್ಯ ಸಾಗಾಟ ಮಾಡುತ್ತಿದ್ದು ಕಂಡುಬಂದಿದೆ.

ಬಳಿಕ ರಟ್ಟಿನ ಬಾಕ್ಸ್ ಶೋಧನೆ ಮಾಡಿದಾಗ ಒಟ್ಟು 5.275 ಲೀಟರ್‌ನ 3485 ರೂಪಾಯಿ ಮದ್ಯದ ಪತ್ತೆಯಾಗಿದೆ. ಕಾನೂನು ಬಾಹಿರವಾಗಿ ಮದ್ಯ ಸಾಗಾಟ ಮಾಡಲು ಉಪಯೋಗಿಸಿದ ಮೋಟಾರ್‌ಸೈಕಲ್‌ ಹಾಗೂ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿ ಸಂತೋಷ್‌ ಕುಮಾರ್‌ಮತ್ತು ಕಾನೂನು ಬಾಹಿರವಾಗಿ ಹೆಚ್ಚು ಮದ್ಯ ನೀಡಿರುವ ಮಂಡೆಕೋಲು ಬಾರ್‌ಅಂಡ್‌ ರೆಸ್ಟೋರೆಂಟ್‌ ಸಿಬ್ಬಂದಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ.