ಸುಳ್ಯದ ಉದ್ಯಮಿ ಆರ್.ಕೆ ನಾಯರ್ ರನ್ನು ಕೊಂಡಾಡಿದ ಆನಂದ್ ಮಹೀಂದ್ರಾ

ಸುಳ್ಯ: ಸುಳ್ಯ ಮೂಲದ ಗುಜರಾತ್‌ನ ಉದ್ಯಮಿ, ಪರಿಸರ ಕಾರ್ಯಕರ್ತ ಡಾ| ಆರ್‌.ಕೆ. ನಾಯರ್‌ ಅವರ ಬಗ್ಗೆ ಮಹೀಂದ್ರ ಗ್ರೂಪ್‌ ಆಫ್‌ ಕಂಪೆನಿಯ ಚೇರ್ಮೆನ್‌ ಆನಂದ್‌ಮಹೇಂದ್ರ ಅವರು ಮೆಚ್ಚುಗೆ ಯನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ವ್ಯಕ್ತಪಡಿಸಿದ್ದಾರೆ.

ಆನಂದ ಮಹೇಂದ್ರ ಅವರು ಮಿಯಾವಾಕಿ ಅರಣ್ಯ ಎಂದರೇನು ಎಂದು ನನಗೆ ತಿಳಿದಿತ್ತು, ಆದರೆ ಡಾ.ನಾಯರ್‌ ಅವರ ಬಗ್ಗೆ ಮತ್ತು ಅವರು ಭಾರತದಲ್ಲಿ ವಿಶ್ವದ ಅತಿದೊಡ್ಡ ಅರಣ್ಯವನ್ನು ಹೇಗೆ ರಚಿಸಿದರು ಎಂಬುದರ ಬಗ್ಗೆೆ ತಿಳಿದಿರಲಿಲ್ಲ. ನಮ್ಮ ನಡುವೆ ಅಂತಹ ವೀರರಿದ್ದಾರೆ. ಅವರಿಗೆ ನಾನು ಕೃತಜ್ಞ ಎಂದು ಬರೆದುಕೊಂಡಿದ್ದಾರೆ. ಜತೆಗೆ ದೇಶದಲ್ಲಿ ಡಾ| ಆರ್‌.ಕೆ. ನಾಯರ್‌ ರೂಪಿಸಿದ ಮಿಯಾವಾಕಿ ಅರಣ್ಯಗಳ ಕುರಿತ ವಿಡಿಯೋವನ್ನು ಹಂಚಿಕೊಂಡಿ ದ್ದಾರೆ. ಈ ಪೋಸ್ಟ್‌ ಅನ್ನು ಈವರೆಗೆ 3.16 ಲಕ್ಷಕ್ಕೂ ಅಧಿಕ ಮಂದಿ ನೋಡಿದ್ದಾರೆ. 13 ಸಾವಿರ ಮಂದಿ ಇಷ್ಟ ಪಟ್ಟಿದ್ದರೆ, 2.5 ಸಾವಿರ ಮಂದಿ ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಡಾ| ನಾಯರ್‌, ಆನಂದ್‌ ಮಹೀಂದ್ರ ಅವರಂತಹಾ ವ್ಯಕ್ತಿಗಳು ನಮ್ಮನ್ನು ಗುರುತಿಸಿ ನಮ್ಮ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.