ಸುಳ್ಯ: ಒಡಿಶಾ ಕರಾವಳಿಯಲ್ಲಿ ಉಂಟಾದ ಚಂಡಮಾರುತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ಇದರ ಮುಂದುವರಿದ ಭಾಗವಾಗಿ ಸುಳ್ಯ ತಾಲೂಕಿನ ಹಲವು ಪ್ರದೇಶಗಳಲ್ಲಿ ಮಧ್ಯಾಹ್ನದ ವೇಳೆಗೆ ವರ್ಷಧಾರೆ ಆರಂಭವಾಗಿದೆ.
ತಾಲೂಕಿನ ಗುತ್ತಿಗಾರು, ದೇವಚಳ್ಳ, ನಡುಗಲ್ಲು, ಕೊಲ್ಲಮೊಗ್ರು, ಕಡಬ ತಾಲೂಕಿನ ಸುಬ್ರಹ್ಮಣ್ಯ, ಏನೆಕಲ್ಲು ಪ್ರದೇಶಗಳಲ್ಲಿ ಮಳೆಯಾಗುತ್ತಿರುವ ವರದಿಗಳು ಬಂದಿವೆ.
ಮಳೆಯ ಜೊತೆಗೆ ಗುಡುಗು ಕೂಡಾ ಇದ್ದು, ಏಕಾಏಕಿ ಶುರುವಾದ ಮಳೆಯಿಂದ ಜನ ತೊಂದರೆಗೆ ಸಿಲುಕಿದ್ದಾರೆ. ಕಳೆದ ಒಂದು ಗಂಟೆಯಿಂದ ಮಳೆ ಸುರಿಯುತ್ತಿದ್ದು, ಸೆಕೆಯಿಂದ ಬಳಲಿದ್ದ ಸುಳ್ಯ ತಂಪಾಗಿದೆ.