ಗುತ್ತಿಗಾರು: ಇಲ್ಲಿನ ಕೆನರಾ ಬ್ಯಾಂಕ್ ಎಟಿಎಂ ಕಳೆದ ಒಂದು ತಿಂಗಳಿನಿಂದ ಮುಚ್ಚೇ ಇದ್ದು ಗ್ರಾಹಕರ ಸೇವೆಗೆ ಲಭ್ಯವಾಗದೇ ಮೌನವಾಗಿದೆ.
ಗುತ್ತಿಗಾರು ಪೇಟೆಯ ಏಕೈಕ ರಾಷ್ಟ್ರೀಕೃತ ಬ್ಯಾಂಕ್ ನ ಏಕಮಾತ್ರ ಎಟಿಎಂ ಇದಾಗಿದ್ದು, ಕೆನರಾ ಬ್ಯಾಂಕ್ ನ ಶಾಖೆಯಲ್ಲಿ ತುಂಬಿ ತುಳುಕುತ್ತಿರುವ ಗ್ರಾಹಕರ ಸೇವೆಗೆ ಇದು ಅನುಕೂಲವಾಗುತ್ತಿತ್ತು.
ಇದೀಗ ಎಟಿಎಂ ಗೆ ಶಟರ್ ಎಳೆಯಲಾಗಿದ್ದು, ಸೇವೆ ಲಭ್ಯವಾಗುತ್ತಿಲ್ಲ. ಹಣ ವಿತ್ಡ್ರಾ ಮಾಡಲು ಮತ್ತೆ ಗ್ರಾಹಕರು ಬ್ಯಾಂಕ್ ನಲ್ಲಿ ದಿನಪೂರ್ತಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.