ಸುಳ್ಯ: ತಾಲೂಕು ಕೇಂದ್ರ ಸುಳ್ಯ ಸೇರಿದಂತೆ ತಾಲೂಕಿನ ಹಲವೆಡೆ ಸಂಜೆ ವೇಳಗೆ ಭರ್ಜರಿ ಮಳೆಯಾಗಿದೆ.
ಸಂಜೆ 4ರ ಸುಮಾರಿಗೆ ಸುಳ್ಯದಲ್ಲಿ ಸುರಿದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದು ಇಳೆ ತಂಪಾಗಿಸಿದೆ. ಇತ್ತ ನಿಂತಿಕಲ್ಲು, ಬಾಳಿಲ, ಗುತ್ತಿಗಾರು, ಎಲಿಮಲೆ ಮುಂತಾದೆಡೆ ಉತ್ತಮ ಮಳೆಯಾದ ಸುದ್ದಿ ಲಭಿಸಿದೆ.
ಇನ್ನು ಜಾಲ್ಸೂರು ಸೇರಿದಂತೆ ಕೆಲವೆಡೆ ಆಲಿಕಲ್ಲು ಮಳೆಯೂ ಸುರಿದಿದೆ. ಸೆಕೆಯಿಂದ ಬಳಲಿದ್ದ ಜನತೆ ಮಳೆಯ ಸಿಂಚನದಿಂದ ಫುಲ್ ಖುಷ್ ಆಗಿದ್ದಾರೆ.