ಮಾ. 24-25: ವಳಲಂಬೆಯಲ್ಲಿ ಸತ್ಯನಾರಾಯಣ ಪೂಜೆ, ದೈವಗಳ ನೇಮೋತ್ಸವ

ಗುತ್ತಿಗಾರು. ಮಾ.23: ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.24 ರ ಬೆಳಗ್ಗೆ ಗಣಪತಿ ಹೋಮ, ಶತ ರುದ್ರಾಭಿಷೇಕ, ಹಾಗೂ 40ನೇ ವರ್ಷದ ಲಕ್ಷ್ಮಿ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಲಿದೆ. ಸಂಜೆ ಭಜನೆ, ರಾತ್ರಿ ಶ್ರೀ ದುರ್ಗಾ ಪೂಜೆ ಮತ್ತು ಕಾರ್ತಿಕ ಪೂಜೆ ನಡೆಯಲಿದೆ. ರಾತ್ರಿ ದಿl ಕೀರ್ತಿಶೇಷ ದೇವಕಿ ಸ್ಮರಣಾರ್ಥ
ಶ್ರೀ ಪಂಜುರ್ಲಿ ಪ್ರಸಾದಿತ ಯಕ್ಷಗಾನ ಮಂಡಳಿ ಸಾಸ್ತಾನ ಉಡುಪಿ ಇವರಿಂದ “ಸತ್ಯದ ಸ್ವಾಮಿ ಕೊರಗಜ್ಜ” ಯಕ್ಷಗಾನ ನಡೆಯಲಿದೆ.

ಮಾ. 25 ಬೆಳಿಗ್ಗೆ ರಾಜ್ಯ ದೈವ ಮತ್ತು ಪುರುಷ ದೈವಗಳ ನೇಮೋತ್ಸವ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳಲು ಆಡಳಿತ ಮಂಡಳಿ ವಿನಂತಿಸಿದೆ.