ಸುಬ್ರಹ್ಮಣ್ಯ: ಯುವಕ ಮಂಡಲ ಬಿಳಿನೆಲೆ ಕೈಕಂಬವು ಸುವರ್ಣ ಮಹೋತ್ಸವದ ಪ್ರಯುಕ್ತ ಕಟ್ಟಡ ನಿರ್ಮಾಣ ಮಾಡುತ್ತಿದ್ದು ಇದಕ್ಕೆ ಶ್ರೀ ಧರ್ಮಸ್ಥಳ ಶ್ರೀ ಕ್ಷೇತ್ರದಿಂದ ಸಹಾಯಧನದ ಮಂಜೂರಾತಿ ಪತ್ರವನ್ನು ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ವಲಯ ಮೇಲ್ವಿಚಾರಕರಾದ ರವಿಪ್ರಕಾಶ್ ರವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಯುವಕ ಮಂಡಲ ಅಧ್ಯಕ್ಷರಾದ ಶಿವಪ್ರಸಾದ್ ನಡ್ತೋಟು, ಪೂರ್ವಾಧ್ಯಕ್ಷರುಗಳಾದ ವಿಜಯ್ ಕುಮಾರ್ ನಡ್ತೋಟು, ಪ್ರವೀಣ್ ಕುಮಾರ್ ಪಿಳಿಕಜೆ, ಚಿದಾನಂದ ಕಳಿಗೆ ಪಳ್ಳಿಗದ್ದೆ,ನವೀನ್ ನಡ್ತೋಟು, ಬಿಳಿನೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾದ ವಾಡ್ಯಪ್ಪ ಗೌಡ ಎರ್ಮಾಯಿಲ್, ಗ್ರಾಮಾಭಿವೃಧ್ದಿ ಯೋಜನೆಯ ಧರ್ಮಪಾಲ ಗೌಡ ದಂಬೆಕೋಡಿ, ಸೇವಾನಿರತರಾದ ಭವ್ಯಶ್ರೀ ಕುಕ್ಕಾಜೆ,ವಿನೋದ್, ವಿಶ್ವನಾಥ ಕೈಕಂಬ, ಕಿರಣ್ ಕುಮಾರಕೃಪಾ, ಬಾಲಕೃಷ್ಣ, ರಾಕೇಶ್ ಪಳ್ಳಿಗದ್ದೆ, ಸಂತೋಷ್ ಕೈಕಂಬ, ಜಾಗೃತ್ ಕಳಿಗೆ, ತೀರ್ಥೇಶ್ ನಡ್ತೋಟು ಹಾಗೂ ಇನ್ನಿತರರು ಉಪಸ್ಥಿತರಿದ್ದರು.