ಸುಬ್ರಹ್ಮಣ್ಯ: ಬೈಕ್ – ಕಾರು‌ ನಡುವೆ ಅಪಘಾತ; ಸವಾರ ಗಂಭೀರ

ಸುಬ್ರಹ್ಮಣ್ಯ: ಇಲ್ಲಿನ ಸಮೀಪದ ಕೈಕಂಬ ಬಳಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಾ.19ರ ಸಂಜೆ ನಡೆದಿದೆ.

ಬೈಕ್ ಸವಾರನನ್ನು ಕಡಬ ತಾಲೂಕಿನ ಕಲ್ಲುಗುಡ್ಡೆ ನಿವಾಸಿ ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡ ಆತನನ್ನು ಕಡಬ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.