ಪಂಜ: ನಿಲ್ಲಿಸಲಾಗಿದ್ದ ಕಾರು ತನ್ನಷ್ಟಕ್ಕೆ ಚಲಿಸಿ ಢಿಕ್ಕಿ ಹೊಡೆದ ಪರಿಣಾಮ ನಿವೃತ್ತ ವಲಯ ಅರಣ್ಯಾಧಿಕಾರಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಐವತ್ತೂಕ್ಲು ಗ್ರಾಮದಲ್ಲಿ ಮಾ.15ರಂದು ಸಂಭವಿಸಿದೆ. ಐವತ್ತೋಕ್ಲು ಮುಚ್ಚಿಲ ಮರಕ್ಕಡ ಸಮೀಪದ ನಿವಾಸಿ ಕೆ.ವಿ.ಜೋಸೆಫ್ (74) ಮೃತರು.
ಅವರು ಅಂಗಳದಲ್ಲಿ ನಿಂತಿದ್ದ ವೇಳೆ ಕಾರು ಹಿಮ್ಮುಖ ಚಲಿಸಿ ಜೋಸೆಫ್ ಅವರಿಗೆ ಗುದ್ದಿದೆ. ಜೋಸೆಫ್ ಅವರು ಸಂಪಾಜೆ, ಪಂಜ, ಪುತ್ತೂರು, ಮಂಗಳೂರಿನಲ್ಲಿ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.