ಗುತ್ತಿಗಾರು: ಪ್ರಾ.ಕೃ.ಪ‌ ಸಂಘದ ‌ಅಧ್ಯಕ್ಷರಾಗಿ‌ ಜಯಪ್ರಕಾಶ್ ಮೊಗ್ರ, ಉಪಾಧ್ಯಕ್ಷರಾಗಿ ಕೃಷ್ಣಯ್ಯ ಮೂಲೆತೋಟ

ಗುತ್ತಿಗಾರು: ಇಲ್ಲಿನ‌ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಜಯಪ್ರಕಾಶ್ ಮೊಗ್ರ ಹಾಗೂ ಉಪಾಧ್ಯಕ್ಷರಾಗಿ ಕೃಷ್ಣಯ್ಯ ಮೂಲೆತೋಟ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಯಪ್ರಕಾಶ್ ಮೊಗ್ರ ಅವರನ್ನು ವಿನ್ಯಾಸ್ ಕೊಚ್ಚಿ ಸೂಚಿಸಿದರು, ಕೃಷ್ಣಯ್ಯ ಮೂಲೆತೋಟ ಅವರನ್ನು ವೆಂಕಟ್ ದಂಬೆಕೋಡಿ ಸೂಚಿಸಿದರು. ಈ ಸಂದರ್ಭ ನಿರ್ದೇಶಕರುಗಳಾದ ಮುಳಿಯ ಕೇಶವ ಭಟ್, ನವೀನ್ ಬಾಳುಗೋಡು, ರವೀಂದ್ರ ಕಾನೋವು ಅಡ್ಡನಪಾರೆ, ಪದ್ಮನಾಭ ಮೀನಾಜೆ, ಶ್ರೀಮತಿ ತಿಲಕ ಕೋಲ್ಯ, ಶ್ರೀಮತಿ ವಿನುತಾ ಜಾಕೆ, ಜನಾರ್ಧನ ನಾಯ್ಕ ಅಚ್ರಪ್ಪಾಡಿ, ಕುಂಞ ಬಳ್ಳಕ್ಕ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಈ ಸಂದರ್ಭ ಬಿಹೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ದೇವಿ ಪ್ರಸಾದ್ ಚಿಕ್ಮುಳಿ, ಅಚ್ಚುತ ಗುತ್ತಿಗಾರು, ಶಿವಪ್ರಕಾಶ್ ಕಡಪಳ, ವರ್ಷಿತ್ ಕಡ್ತಲ್ ಕಜೆ, ಹರ್ಷಿತ್ ಕಡ್ತಲ್ ಕಜೆ, ಲಕ್ಷ್ಮೀಶ ಅಡ್ಡನಪಾರೆ ಮತ್ತಿತರರು ಉಪಸ್ಥಿತರಿದ್ದರು. ಚುನಾವಣೆ ಅಧಿಕಾರಿಯಾಗಿ ಶಿವಲಿಂಗಯ್ಯ ಉಪಸ್ಥಿತರಿದ್ದರು. ಕಾರ್ಯನಿರ್ವಹಣಾಧಿಕಾರಿ ಶರತ್ ಎ.ಕೆ, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಮನೋಜ್ ಕುಮಾರ್ ಸಹಕರಿಸಿದರು.