ಸುಬ್ರಹ್ಮಣ್ಯ: ಇಲ್ಲಿನ ಸಮೀಪದ ಕುಕ್ಕೆ ಸುಬ್ರಹ್ಮಣ್ಯ – ಕಡಬ ರಾಜ್ಯ ಹೆದ್ದಾರಿಯ ಕೈಕಂಬ ಬಳಿ ಸರ್ಕಾರಿ ಬಸ್ ಹಾಗೂ ಸ್ಕೂಟಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸವಾರ ದುರ್ಮರಣವನ್ನಪ್ಪಿದ ಘಟನೆ ಇದೀಗ ಸಂಭವಿಸಿದೆ.
ಮೃತ ಸ್ಕೂಟಿ ಸವಾರನನ್ನು ಚೇರು ಗ್ರಾಮದ ದಿ. ವಿಶ್ವನಾಥ ಎಂಬವರ ಪುತ್ರ ವಿನ್ಯಾಸ್ ಎಂದು ಗುರುತಿಸಲಾಗಿದೆ. ಈತ ಸ್ಕೂಟಿಯಲ್ಲಿ ಬಿಳಿನೆಲೆ ಭಾಗದಿಂದ ಕೈಕಂಬಕ್ಕೆ ಬರುತ್ತಿದ್ದು ಈ. ವೇಳೆ ಕೋಟೆಹೊಳೆ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾತನನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರು ಎಳೆದಿರುವುದಾಗಿ ತಿಳಿದುಬಂದಿದೆ. ಮೃತರು ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.