ಗುತ್ತಿಗಾರು: ನಾಲ್ಕೂರು ಗ್ರಾಮದ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀಮತಿ ನಿರ್ಮಲಾ ಪದ್ಮನಾಭ ಆಯ್ಕೆಯಾಗಿದ್ದಾರೆ.
ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ್ ಉತ್ರಂಬೆ ಸೂಚಿಸಿ, ಚಂದ್ರಕಲಾ ಉತ್ರಂಬೆ ಅನುಮೋದಿಸುವ ಮೂಲಕ ನಿರ್ಮಲಾ ಪದ್ಮನಾಭರವರು ಅವಿರೋಧವಾಗಿ ಆಯ್ಕೆಯಾದರು.
ಸದಸ್ಯರುಗಳಾಗಿ ದೇವಾಲಯದ ಪ್ರಧಾನ ಅರ್ಚಕ ಮಹಾಬಲೇಶ್ವರ ಭಟ್, ರಾಜೇಶ್ ಉತ್ರಂಬೆ, ಸೂರ್ಯಪ್ರಕಾಶ್ ಕೋಟೆಬೈಲು, ಮೋನಪ್ಪ ಚಾರ್ಮತ, ವೆಂಕಪ್ಪ ನಾಯ್ಕ ಅಂಜೇರಿ, ಷಣ್ಮುಖ ಅಂಬೆಕಲ್ಲು, ಚಂದ್ರಕಲಾ ಉತ್ರಂಬೆ, ರತ್ನಾವತಿ ಹುಲ್ಲುಕುಮೇರಿ ಆಯ್ಕೆಯಾಗಿದ್ದಾರೆ.