ಅಮರ ಸಂಘಟನಾ ಸಮಿತಿ (ರಿ.)ಸುಳ್ಯ ಇದರ ವತಿಯಿಂದ ದಿವಂಗತ ಮುರಾರಿ ಕಡಪಳ ಮತ್ತು ದಿವಂಗತ ನವೀನ್ ಸಂಕೇಶ ಇವರ ಸ್ಮರಣಾರ್ಥ 2ನೇ ವರುಷದ ಬ್ರಹತ್ ರಕ್ತದಾನ ಶಿಬಿರ ಫೆ. 2ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜಡ್ಕದಲ್ಲಿ ನಡೆಯಿತು.

ಅಮರ ಸಂಘಟನಾ ಸಮಿತಿ ಇದರ ಅಧ್ಯಕ್ಷರಾದ ಕುಸುಮಾಧರ ಮುಕ್ಕೂರು ಇವರು ಅಧ್ಯಕ್ಷತೆ ವಹಿಸಿದ್ದರು. ಮಿತ್ರವ್ರಂದ ಪೈಲಾರು ಇದರ ನಿರ್ದೇಶಕರಾದ ಜಯಂತ್ ನಾಯರಕಲ್ಲು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಜಾನಕಿ ಕಂದಡ್ಕ ಅಧ್ಯಕ್ಷರು ಗ್ರಾಮ ಪಂಚಾಯತ್ ಅಮರ ಮುಡ್ನೂರು, ವಿನಯ ಸಂಕೇಶ ಅಧ್ಯಕ್ಷರು ಎಸ್ ಡಿ ಎಂ ಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜಡ್ಕ, ಜಯಪ್ರಕಾಶ್ ದೊಡ್ಡಿಹಿತ್ಲು ಸದಸ್ಯರು ಗ್ರಾಮ ಪಂಚಾಯತ್ ಅಮರ ಮುಡ್ನೂರು, ಕುಲದೀಪ್ ಬಿ ಜೆ ಸಾರ್ವಜನಿಕ ಸಂಪರ್ಕ ಅಧಿಕಾರಿ ರೊಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು,ಸಜನಿ ಮಾರ್ಟಿಸ್ ತಾಂತ್ರಿಕ ಮೇಲ್ವಿಚರಕರು ರೊಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇವರುಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಅಮರ ಸಂಘಟನಾ ಸಮಿತಿಯ ಸದಸ್ಯರಾದ ಸಾತ್ವೀಕ್ ಮಡಪ್ಪಾಡಿ, ರಜನಿಕಾಂತ್ ಉಮ್ಮಡ್ಕ, ಜಯಪ್ರಸಾದ್ ಸಂಕೇಶ, ಹಿತೇಶ್ ನಾರ್ಕೊಡು, ಮಿಥುನ್ ಪೈಲಾರು, ಮನೀಶ್ ಕಡಪಳ,ಅನೀತಾ ಮಂಜುನಾಥ ಕುಕ್ಕುಜಡ್ಕ, ಇವರುಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಹರ್ಷಿತ್ ದಾತಡ್ಕ ಸ್ವಾಗತಿಸಿ, ಪ್ರವೀಣ್ ಕುಲಾಲ್ ವಂದಿಸಿದರು. ಪ್ರದೀಪ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು.ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಭಾಗವಹಿಸಿದರು.