ಗುತ್ತಿಗಾರು: ಇಲ್ಲಿನ ಸಮೀಪದ ಹರಿಹರ ಪಳ್ಳತ್ತಡ್ಕ ಗ್ರಾಮದಲ್ಲಿ ಬೀಡಾಡಿ ಹೋರಿ ಎರಗಿ ವ್ಯಕ್ತಿ ಗಾಯಗೊಂಡ ಘಟನೆ ಜ.10ರಂದು ಸಂಭವಿಸಿದೆ.
ಹರಿಹರ ಪಳ್ಳತ್ತಡ್ಕ ಗ್ರಾಮದ ಭೀಮಗುಳಿ ಪುಟ್ಟಣ್ಣ ಗೌಡ ಗಾಯಗೊಂಡವರು. ಅವರು ಮನೆಯ ಸಮೀಪ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಂದರ್ಭ ರಸ್ತೆ ಬದಿಯಿದ್ದ ಹೋರಿ ಏಕಾಏಕಿ ಅವರ ಮೇಲೆ ಎರಗಿದೆ.
ಘಟನೆಯಲ್ಲಿ ತಲೆ, ಸೊಂಟ, ಪಕ್ಕೆಲುಬಿಗೆ ಗಾಯವಾಗಿದೆ. ಗಾಯಗೊಂಡ ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀಡಾಡಿ ಜಾನುವಾರುಗಳ ಹಾವಳಿ ಹರಿಹರ ಪಳ್ಳತ್ತಡ್ಕದಲ್ಲಿ ಹೆಚ್ಚಾಗಿದ್ದು ನಿಯಂತ್ರಣಕ್ಕೆ ಆಗ್ರಹ ಕೇಳಿಬಂದಿದೆ.