ಸುಬ್ರಹ್ಮಣ್ಯ : ಇಲಿ ಪಾಷಾಣ ಸೇವಿಸಿ ಅಸ್ಪಸ್ಥಗೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯದಿಂದ ವರದಿಯಾಗಿದೆ. ಇಲಿಪಾಷಾಣ ಸೇವಿಸಿ ಅಸ್ವಸ್ಥರಾಗಿದ್ದ ವ್ಯಕ್ತಿಯನ್ನು ಕಾಣಿಯೂರಿನ ಕ್ಲಿನಿಕ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈಧ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈಧ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತರನ್ನು ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ಗ್ರಾಮದ ತುಂಬತ್ತಾಜೆಯ ಬಾಲಕೃಷ್ಣ ಗೌಡ ಎನ್ನಲಾಗಿದೆ.
ಕೃಷಿ ಕೆಲಸ ಮಾಡಿಕೊಂಡಿದ್ದ ಇವರು ರಕ್ತದೊತ್ತಡದಿಂದ ಬಳಲುತ್ತಿದ್ದರು. ಹೀಗಾಗಿ ಪಂಜದ ವೈದ್ಯರಲ್ಲಿ ಔಷಧಿ ಮಾಡಿಕೊಂಡಿದ್ದರೂ ಕಡಿಮೆಯಾಗದ ಕಾರಣ ಬೇಸತ್ತು ಆತ್ಮಹತ್ಯೆಗೆ ಪ್ರಯತ್ನಿಸಿದರು ಎನ್ನಲಾಗಿದೆ. ಜ.6 ರಂದು ಮನೆಯವರಿಗೆ ವಾಂತಿ ಬರುವುದಾಗಿ ತಿಳಿಸಿದ್ದು, ಉಪಚರಿಸಿ ಕಾಣಿಯೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ವಾಂತಿ ಮಾಡಿಕೊಂಡಿದ್ದರು.
ವಿಚಾರಿಸಿದಾಗ ಇಲಿ ಪಾಷಾಣ ಸೇವಿಸಿರುವುದಾಗಿ ತಿಳಿಸಿದ್ದು, ಬಳಿಕ ಮೃತರ ಮಗ ಕುಲ್ಕುಂದದ ಸತ್ಯನಾರಾಯಣ ಎಂಬವರು ನೀಡಿದ ದೂರಿನಂತೆ ಸುಬ್ರಹ್ಮಣ್ಯ ಠಾಣೆ ಯುಡಿಆರ್ ನಂಬ್ರ: 01/2025 ಕಲಂ: 194 BNSS ಯಂತೆ ಪ್ರಕರಣ ದಾಖಲಾಗಿರುತ್ತದೆ.