ಸಮಗ್ರ ನ್ಯೂಸ್: ಅರಂತೋಡು- ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಮೊದಲ ಎರಡೂವರೆ ವರ್ಷಗಳ ಅವದಿಯ ಅಧ್ಯಕರಾಗಿ ಸಂತೋಷ್ ಕುತ್ತಮೊಟ್ಟೆ ಹಾಗೂ ಉಪಾಧ್ಯಕ್ಷರಾಗಿ ಜನಸ್ನೇಹಿ ವೈದ್ಯ ಡಾ.ಲಕ್ಷ್ಮೀ ಶ ಕಲ್ಲುಮುಟ್ಲುರವರು ಆಯ್ಕೆಯಾಗಿದ್ದಾರೆ.

ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಪಕ್ಷ ಮತ್ತು ಪರಿವಾರ ನಾಯಕರ ಸೂಚನೆಯಂತೆ ಮುಂದಿನ ಆಯ್ಕೆ ಪ್ರಕ್ರಿಯೆಯಲ್ಲಿ ನಡೆಸಲು ತೀರ್ಮಾನಿಸಿ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ಪಕ್ಷ ಪರಿವಾರ ಮೂಲಗಳಿಂದ ತಿಳಿದು ಬಂದಿದೆ.ಎಲ್ಲಾ ಚುನಾಯಿತ ನಿರ್ದೇಶಕರು ಮತ್ತು ಪಕ್ಷದ ಪ್ರಮುಖರ ಸಮ್ಮುಖದಲ್ಲಿ ಮುಂದಿನ ಎರಡೂವರೆ ವರ್ಷಗಳ ಎರಡನೆ ಅವಧಿಯ ಅಧ್ಯಕ್ಷ , ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆಯವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಸಂದರ್ಭದಲ್ಲಿ ನಿರ್ದೆಶಕರಾದ ದಯಾನಂದ ಕುರುಂಜಿ, ಚಂದ್ರಶೇಖರ ಚೋಡಿಪಣೆ, ಶಿವಾನಂದ ಕುಕ್ಕುಂಬಳ, ಉದಯಕುಮಾರ್ ಉಳುವಾರು ಪ್ರಶಾಂತ್ ಕಾಪಿಲ, ಶ್ರೀಲತಾ ದೇರಾಜೆ, ಲೋಚನ ಕೊಳಲುಮೂಲೆ, ದಿನೇಶ್ ಅರಮನೆಗಯ, ಪದ್ಮಯ್ಯ ಅಡ್ಯಡ್ಕ ಚಂದ್ರಶೇಖರ ತೊಡಿಕಾನ ಉಪಸ್ಥಿತರಿದ್ದರು.