ಕುಕ್ಕೆ ಸುಬ್ರಹ್ಮಣ್ಯ: ಹಿರಿಯ ಭಕ್ತರಿಗಾಗಿ ಮೆಟ್ಟಿಲೇರಲು ಸ್ವಯಂಚಾಲಿತ ರ‍್ಯಾಂಪ್‌

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೆಟ್ಟಿಲು ಹತ್ತಲು-ಇಳಿಯಲು ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗಾಗಿ ಆಸನ ಸೌಲಭ್ಯವಿರುವ ಸ್ವಯಂಚಾಲಿತ ರ‍್ಯಾಂಪ್‌ ಅಳವಡಿಸಲಾಗುತ್ತಿದ್ದು ಶೀಘ್ರದಲ್ಲೇ ಭಕ್ತರ ಉಪಯೋಗಕ್ಕೆ ಲಭಿಸಲಿದೆ.

ಆಡಳಿತಾಧಿಕಾರಿ ಜುಬಿನ್ ಮೊಹಪಾತ್ರಾ ಕಳೆದ ವರ್ಷ ವಿಶೇಷ ಸಭೆ ನಡೆಸಿ ಈ ಸೌಲಭ್ಯದ ಯೋಜನೆ ರೂಪಿಸಿದ್ದರು. ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ಪ್ರಮೋದ್ ಕುಮಾರ್ ಮತ್ತು ದೇವಸ್ಥಾನದ ಎಂಜಿನಿಯರ್‌ ಉದಯ ಕುಮಾರ್ ಅವರ ನೆರವಿನಲ್ಲಿ ಯೋಜನೆ ಜಾರಿಗೆ ಬಂದಿದೆ.

ನೆದರ್ಲೆಂಡ್‌ನಿಂದ ತಂದಿರುವ ರ‍್ಯಾಂಪ್‌ಗೆ ₹ 4.17 ಲಕ್ಷ ವೆಚ್ಚವಾಗಿದ್ದು ಎಎಆರ್‌ಡಿಐಐಎನ್‌ಜಿ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಇದನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿದೆ.