ಹಾಲೆಮಜಲು: ಆರೋಗ್ಯ ಮಾಹಿತಿ ಮತ್ತು ಔಷಧಿ ಕಿಟ್ ವಿತರಣೆ

ಗುತ್ತಿಗಾರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ರಿ. ಮಂಗಳೂರು, ವಿಜಯ ಗ್ರಾಮ ಸಮಿತಿ ನಾಲ್ಕೂರು ಇವುಗಳ ಆಶ್ರಯದಲ್ಲಿ ಸ ಕಿ. ಪ್ರಾ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಹಾಲೆಮಜಲು ಇಲ್ಲಿ ಮಕ್ಕಳಲ್ಲಿ ಕಂಡು ಬರುವ ಕಾಲುಬಾಯಿ ಜ್ವರ ಹಾಗೂ ಅದಕ್ಕೆ ಚಿಕಿತ್ಸೆ ಮತ್ತು ಔಷಧಿ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸಮಿತಿಯ ಅಧ್ಯಕ್ಷ ಡಿ.ಆರ್. ಉದಯಕುಮಾರ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಡಾ. ನಿಶಾಂತ್ ಅರ್ನೋಜಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಆರೋಗ್ಯ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷೆ ಸವಿತಾ ಎಚ್. ಶಾಲಾ ಮುಖ್ಯ ಶಿಕ್ಷಕಿ ಜಯಂತಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ತೇಜಕುಮಾರಿ ಉಪಸ್ಥಿತರಿದ್ದರು. ಅತಿಥಿಗಳು ಮಕ್ಕಳಿಗೆ ಪ್ರತಿಷ್ಠಾನದಿಂದ ಕೊಡಲ್ಪಡುವ ಔಷಧಿ ಕಿಟ್‌ಗಳನ್ನು ವಿತರಿಸಿದರು. ಸಭೆಯಲ್ಲಿ ಶಿಕ್ಷಕಿ ಲತಾಶ್ರೀ, ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯರು ಆಶಾ ಕಾರ್ಯಕರ್ತೆ, ಮಕ್ಕಳ ಪೋಷಕರು, ಮಕ್ಕಳು ಉಪಸ್ಥಿತರಿದ್ದರು. ವಿಜಯ ಗ್ರಾಮ ಸಮಿತಿ ನಾಲ್ಕೂರು ಕಾರ್ಯದರ್ಶಿ ದಿನೇಶ್ ಹಾಲೆಮಜಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.