ಮಡಪ್ಪಾಡಿ: ಪ್ರಗತಿ ಬಂಧು ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ

ಮಡಪ್ಪಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ) ಸುಳ್ಯ ತಾಲೂಕು ಇದರ ವತಿಯಿಂದ ಬಲ್ಕಜೆ ಮತ್ತು ಮಡಪ್ಪಾಡಿ ಒಕ್ಕೂಟಗಳ ಸಂಘಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ ನಡೆಯಿತು. ಒಕ್ಕೂಟದ ಅಧ್ಯಕ್ಷ ಗೋಪಾಲಕೃಷ್ಣರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಜನಜಾಗೃತಿ ವೇದಿಕೆ ಗುತ್ತಿಗಾರು ವಲಯದ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯೋಜನೆಯು ನಡೆದು ಬಂದ ದಾರಿ ಮತ್ತು ಅದರಿಂದ ನಾವು ಪ್ರಯೋಜನಗಳನ್ನು ಪಡೆದು ಅಭಿವೃದ್ಧಿಗೊಂಡಿದ್ದೇವೆ, ಇದನ್ನು ನಾವು ಯಾವತ್ತು ಕೂಡ ಮರೆಯಬಾರದು, ಜನಜಾಗೃತಿ ಕಾರ್ಯಕ್ರಮದಲ್ಲಿ ಎಷ್ಟೋ ಜನ ದುಶ್ಚಟಗಳಿಂದ ದೂರವಿದ್ದು, ಇದರಿಂದ ತುಂಬಾ ಕುಟುಂಬಗಳು ಅಭಿವೃದ್ಧಿಗೊಂಡಿದೆ. ಇದಕ್ಕೆ ಎಲ್ಲಾ ಪ್ರೇರಣೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೀಡಿದೆ ಎಂದು ಹೇಳಿದರು.

ಕ್ಷೇತ್ರ ಯೋಜನಾಧಿಕಾರಿ ಮಾಧವ ಗೌಡರವರು ಮಾತಾನಾಡಿ, ಯೋಜನೆಯಿಂದ ನಮ್ಮ ಕುಟುಂಬಗಳು, ನಮ್ಮ ಗ್ರಾಮಗಳು, ಯಾವ ರೀತಿ ಅಭಿವೃದ್ದಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಯೋಜನೆಯ ಕಾರ್ಯಕ್ರಮಗಳನ್ನು ನೋಡಲು ಆಗದೆ ಅಸೂಯೆಪಡುತ್ತಿದ್ದಾರೆ. ಇದಕ್ಕೆಲ್ಲಾ ನಾವು ಒಗ್ಗಟ್ಟಾಗಿ ನಿಲ್ಲಬೇಕೆಂದು ಹೇಳಿದರು.

ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರಾದ ಪಿ ಸಿ ಜಯರಾಮ ಮಾತನಾಡಿ, ಯೋಜನೆಯಿಂದ ಅನೇಕ ಕುಟುಂಬಗಳು ಅಭಿವೃದ್ಧಿ ಹೊಂದಿದೆ, ಮಹಿಳೆಯರು
ಸಬಲೀಕರಣಗೊಂಡಿದ್ದಾರೆ. ಯೋಜನೆಯಿಂದ ಕೃಷಿಗೆ ಪೂರಕವಾಗಿ, ಸ್ವಉದ್ಯೋಗಕ್ಕೆ ಪೂರಕವಾಗಿ, ಗ್ರಾಮದ ಅಭಿವೃದ್ಧಿಗಾಗಿ, ಶಿಕ್ಷಣಕ್ಕೆ ಪೂರಕವಾಗಿ ಅನೇಕ ಲಕ್ಷಂತರ ಅನುದಾನಗಳು ಬಂದಿದೆ. ಮುಂದೆಯು ಕೂಡ ಈ ಯೋಜನೆಯನ್ನು ಬಲಪಡಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ಮಡಪ್ಪಾಡಿ ಮತ್ತು ಬಲ್ಕಜೆ ಒಕ್ಕೂಟಗಳ 14 ಸಂಘಗಳಿಗೆ ಒಟ್ಟು ರೂ.4,22,593. ಲಾಭಾಂಶವನ್ನು ವಿತರಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಯೋಜನೆಯಲ್ಲಿ ಪ್ರಾರಂಭದಿಂದ ಉತ್ತಮ ರೀತಿಯಲ್ಲಿ ಸೇವೆಯನ್ನು ನೀಡಿದ ಸುವಿಧಾ ಸಹಾಯಕರಾದ ವಸಂತ ಬಳ್ಳಡ್ಕರವರನ್ನು, ಗೋಪಾಲಕೃಷ್ಣ, ಪ್ರೇಮ ಎಸ್ ಆರ್ ರನ್ನು ಅಭಿನಂದಿಸಲಾಯಿತು. ಪ್ರಗತಿಬಂಧು ಸ್ವಸಹಾಯ ಸಂಘ ಒಕ್ಕೂಟಗಳ ವಲಯ ಅಧ್ಯಕ್ಷರಾದ ಯೋಗೀಶ್ ದೇವ, ಒಕ್ಕೂಟಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರತ್ನ ಶ್ರೀ ಸಂಘದ ಸದಸ್ಯೆ ಪ್ರೇಮ ಎಸ್ ಆರ್ ರವರು ಸ್ವಾಗತಿಸಿ, ಮಡಪ್ಪಾಡಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸೌಮ್ಯ ಎಮ್ ಟಿ ರವರು ಧನ್ಯವಾದವಿತ್ತರು. ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ರವರು ನಿರೂಪಿಸಿದರು.