ಸುಳ್ಯ: ನಗರದ ಖಾಸಗಿ ಬಸ್ ನಿಲ್ದಾಣದ ಬಳಿಯ ತರಕಾರಿ ಅಂಗಡಿಗೆ ನುಗ್ಗಿದ ಕಳ್ಳರು ಹಣ ಕಳವು ಮಾಡಿದ ಘಟನೆ ರವಿವಾರ ರಾತ್ರಿ ನಡೆದಿದೆ.
ಅಂಗಡಿಯಿಂದ ಚಿಲ್ಲರೆ ಹಣ ಕಳವು ನಡೆಸಿದ ಕಳ್ಳ, ತಾನು ತಂದಿದ್ದ ಮದ್ಯದ ಪ್ಯಾಕೆಟನ್ನು ಅಲ್ಲಿಯೇ ಬಿಟ್ಟು ಹೋಗಿರುವುದು ಕಂಡು ಬಂದಿದೆ.
ಕಳೆದ ಒಂದು ವಾರದಲ್ಲಿ ಸುಳ್ಯ, ಪೈಚಾರು, ಅಡ್ಕಾರ್, ಬೆಳ್ಳಾರೆ ಮುಂತಾದ ಕಡೆಗಳಲ್ಲಿ ಅಂಗಡಿಗಳಿಂದ ಕಳವು ನಡೆಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸರು ಗಸ್ತು ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.