ಸುಳ್ಯ :ಸುಳ್ಯ ದ ಹಳೆಗೇಟು ವಿದ್ಯಾನಗರದಲ್ಲಿರುವ ರೂಪ ಕಾಂಪ್ಲೆಕ್ಸ್ ನ ಸುಂದರ ರಾವ್ ಮತ್ತು ಭವಾನಿ ಸುಂದರ ರಾವ್ ಮಾಲಕತ್ವದ ರೂಪ ಜ್ಯೂಸ್ ಮತ್ತು ಚಾಟ್ ಸೆಂಟರ್ ಡಿ.2 ರಂದು ಉದ್ಘಾಟನ ಕಾರ್ಯಕ್ರಮ ನಡೆಯಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯದ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಅವರು ವಹಿಸಿದ್ದರು. ಸುಂದರ ರಾವ್, ಭವಾನಿ ಸುಂದರ ರಾವ್ ಆತಿಥ್ಯ ವಹಿಸಿದ್ದರು.
ಈ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ರಾದ ಗಿರೀಶ್ ಭಾರದ್ವಾಜ್, ಲಯನ್ಸ್ ಮಾಜಿ ರಾಜ್ಯಪಾಲ ಲ.ಎಂ.ಬಿ.ಸದಾಶಿವ, ನ.ಪಂ.ಉಪಾಧ್ಯಕ್ಷ ಬುದ್ಧ ನಾಯ್ಕ ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ದಯಾನಂದ ಕೊಯಿಂಗೋಡಿ, ಪ್ರಗತಿಪರ ಕೃಷಿಕ ವಿಲಿಯಂ ಲಸ್ರಾದೊ, ಮೊಗರ್ಪಣೆ ಜುಮ್ಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಸೀ ಫುಡ್, ಕೇಶವ ಕೃಪಾ ವೇದ ಮತ್ತಿ ಕಲಾ ಪ್ರತಿಷ್ಠಾನದ ಪುರೋಹಿತ್ ನಾಗರಾಜ ಭಟ್, ಕುಂಭಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದ ಮಾಲಕಿ ಶಶಿಕಲಾ ಶುಭಕರ್, ಚಾರ್ಟಡ್ ಅಕೌಂಟೆಂಟ್ ಕಿರಣ್ ಕುಮಾರ್, ಮುಳಿಯ ಜ್ಯುವೆಲ್ಲರ್ಸ್ ಮಾಲಕ ಗೋವಿಂದ ಭಟ್ ಮೊದಲಾದವರು ಅತಿಥಿಗಳಾಗಿದ್ದರು.