ಮುಪ್ಪೇರ್ಯ: ವಿದ್ಯುತ್ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

ನಿಂತಿಕಲ್ಲು: ವಿದ್ಯುತ್‌ ಕಂಬ ಹತ್ತಿ ಕೆಲಸ ಮಾಡುತ್ತಿರುವಾಗ ಕಂಬ ಮುರಿದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಸುಳ್ಯ ತಾಲೂಕಿನ ಮುಪ್ಪೇರ್ಯ ಗ್ರಾಮದ ಕಿಟ್ಟು ದೇವಸ್ಯ (48) ಅವರು ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೆಲವು ಸಮಯದ ಹಿಂದೆ ಕಂಬಕ್ಕೆ ಹತ್ತಿ ವಿದ್ಯುತ್‌ ಲೈನಿನ ಕೆಲಸ ಮಾಡುತ್ತಿರುವಾಗ ಕಂಬ ಬುಡದಿಂದ ಮುರಿದ ಪರಿಣಾಮ ಕಿಟ್ಟು ಅವರು ಕೆಳಕ್ಕೆ ಬಿದ್ದು ಬೆನ್ನುಮೂಳೆ ಮುರಿತಕ್ಕೊಳಗಾಗಿದ್ದರು. ಮೃತರು ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.