ಸುಳ್ಯ: ವೆಂಕಪ್ಪ ಗೌಡ ನಡುಮನೆ ಅವರು ಸುಳ್ಯ ಗಾಂಧಿನಗರದಲ್ಲಿ ಸಣ್ಣದಾದ ಟೀ ಅಂಗಡಿ ತೆರೆದು ಕಾರ್ಯಚರಿಸುದ್ದರು ಅವರು ನ. 27 ರಂದು ನಿಧನ ಹೊಂದಿದರು.ಪ್ರಗತಿ, ಶಿವ, ಲೈಫ್ ಕೇರ್ ಹಾಗೂ ಶ್ರೀ ಮುತ್ತಪ್ಪನ್ ಆಂಬ್ಯುಲೆನ್ಸ್ ಚಾಲಕ ಮಾಲಕರು ಪ್ರತಿನಿತ್ಯವು ಮೃತಪಟ್ಟ ವ್ಯಕ್ತಿಯ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದರು.
ಅಲ್ಲದೆ ತನ್ನ ಕುಟುಂಬದ ಸದಸ್ಯರಂತೆ ಕಾಣುತ್ತಿದ್ದು ವೆಂಕಪ್ಪ ಗೌಡ ನಡುಮನೆ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಆಂಬುಲೆನ್ಸ್ ಚಾಲಕ ಮಾಲಕರು ತಮ್ಮ ಸಂತಾಪವನ್ನು ಸೂಚಿಸಿ ಸುಳ್ಯ ಪೇಟೆಯಲ್ಲಿ ಮೆರವಣಿಗೆ ಮೂಲಕ ಸಾಗಿ ಮೃತದೇಹವನ್ನು ಕೊಡಿಯಾಲ ಬೈಲು ರುಧ್ರಭೂಮಿಗೆ ಸಾಗಿಸಿ ಅಂತ್ಯಸಂಸ್ಕಾರ ನಡೆಸಲಾಯಿತು.