ಸಂಪಾಜೆ: ಮನೆಗೆ ಬೆಂಕಿ ಹೊತ್ತಿಕೊಂಡು ಮನೆಯಲ್ಲಿದ್ದ ವಸ್ತುಗಳು ಹೊತ್ತಿ ಉರಿದ ಘಟನೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಉಂಬಳೆಯಲ್ಲಿ ಸಂಭವಿಸಿದೆ. ಚೆಂಬು ಗ್ರಾಮದ ಉಂಬಳೆ ಮಾನ್ಯ ಎಂ.ಟಿ. ಭಾಸ್ಕರರವರ ಮನೆಗೆ ಬೆಂಕಿ ಹತ್ತಿಕೊಂಡಿದ್ದು, ಮನೆಯಲ್ಲಿದ್ದ ಅಡಿಕೆ, ರಬ್ಬರ್ ಸಹಿತ ಕೃಷಿ ವಸ್ತಗಳು ಸಂಪೂರ್ಣ ಭಸ್ಮವಾಗಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ , ಸಂಪೂರ್ಣ ಮನೆಯೇ ಹೊತ್ತಿ ಉರಿದಿದ್ದು, ಮನೆಯಲ್ಲಿದ್ದ ದಾಖಲೆಪತ್ರ, ಬಟ್ಟೆ ಬರೆ, ನಗದು ಹಣ, ಅಡಿಕೆ ಸೇರಿದಂತೆ ಅಲ್ಪಪ್ರಮಾಣದ ಚಿನ್ನಾಭರಣ ಬೆಂಕಿಗಾಹುತಿ ಆಗಿರುವುದಾಗಿ ತಿಳಿದುಬಂದಿದೆ.