ಕನಕಮಜಲು: ರಾ‌.ಹೆದ್ದಾರಿಯಲ್ಲಿ ಗಜ ಪರೇಡ್| ಆತಂಕದಲ್ಲಿ ಗ್ರಾಮಸ್ಥರು

ಕನಕಮಜಲು: ಇಲ್ಲಿನ ಆನೆಗುಂಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು(ನ.12) ಮುಂಜಾನೆ ಕಾಡಾನೆಗಳು ಸಂಚರಿಸಿವೆ.

ರಾಷ್ಟ್ರೀಯ ಹೆದ್ದಾರಿಯ ಆನೆಗುಂಡಿ ತಿರುವಿನಲ್ಲಿ ಎರಡು ಕಾಡಾನೆಗಳು ರಸ್ತೆ ಬದಿ ಸಂಚರಿಸಿ ಬಳಿಕ ರಸ್ತೆ ಪಕ್ಕದ ಕಾಡಿನೊಳಗೆ ಹೋಗಿರುವುದಾಗಿ ತಿಳಿದುಬಂದಿದೆ.

ಕನಕಮಜಲು ಗ್ರಾಮದ ಕುದ್ಕುಳಿ, ಕುತ್ಯಾಳ, ಕಣಜಾಲು, ಮುಗೇರು ಪರಿಸರದಲ್ಲಿ ಕೃಷಿಕರ ಕೃಷಿ ತೋಟಗಳಿಗೆ ನುಗ್ಗಿ ಪ್ರತಿ ವರ್ಷ ಹಾನಿ ನಡೆಸುತ್ತಿದ್ದ ಕಾಡಾನೆಗಳು ಇದೀಗ ಆನೆಗುಂಡಿ ಪರಿಸರದ ಕಾಡಿನಲ್ಲಿ ಬೀಡು ಬಿಟ್ಟಿರುವುದಾಗಿ ತಿಳಿದುಬಂದಿದೆ.ಇದರಿಂದ ಪರಿಸರದ ರೈತರು ಆತಂಕಗೊಂಡಿದ್ದಾರೆ.