ಹೊಸೋಳಿಕೆ ಕಟ್ಟೆಮನೆಯಲ್ಲಿ ದೀಪಾವಳಿ ಆಚರಣೆ |ತೀರ್ಥರಾಮ ಎಚ್. ಬಿ ಯವರಿಗೆ ಗೌರವ ಸಮರ್ಪಣೆ

ಗುತ್ತಿಗಾರು: ಹೊಸೋಳಿಕೆ ಕಟ್ಟೆಮನೆಯಲ್ಲಿ ದೀಪಾವಳಿ ಆಚರಣೆ ಹಾಗೂ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ನಿವೃತ್ತ ಸಿಬ್ಬಂದಿ, ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ತೀರ್ಥರಾಮ ಎಚ್.ಬಿ. ಹೊಸೋಳಿಕೆಯವರು ಸರಳ, ಸಜ್ಜನ, ದಕ್ಷ, ಭ್ರಷ್ಟಾಚಾರ ರಹಿತ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತಿ ಹೊಂದಿದ್ದರು ಹೊಸೋಳಿಕೆ ಕಟ್ಟೆಮನೆ ಕುಟುಂಬದ ಮುಖ್ಯಸ್ಥರಾಗಿರುವ ಇವರನ್ನು ಕುಟುಂಬಸ್ಥರು ದೀಪಾವಳಿ ಹಬ್ಬದಲ್ಲಿ ಕುಟುಂಬಸ್ಥರ ಸಮಾಗಮದಲ್ಲಿ ಗೌರವಿಸಿದರು.

ಕುಟುಂಬದ ಹಿರಿಯರಾದ ವಿಶ್ವನಾಥ ಹೊಸೋಳಿಕೆ ಯವರು ಅಧ್ಯಕ್ಷತೆ ವಹಿಸಿದರು. ರಾಧಾಕೃಷ್ಣ ಹೊಸೋಳಿಕೆ, ಕುಟುಂಬದ ಅಧ್ಯಕ್ಷ ಎಚ್.ಬಿ. ಕೇಶವ ಹೊಸೋಳಿಕೆ, ಕಾರ್ಯದರ್ಶಿ ರವೀಂದ್ರ ಹೊಸೋಳಿಕೆ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು. ಸಾಹಿತಿ ಯೋಗೀಶ್ ಹೊಸೋಳಿಕೆ ಕಾರ್ಯಕ್ರಮ ನಿರ್ವಹಿಸಿದರು.