ಎಲಿಮಲೆ: ಜ್ಞಾನದೀಪ ವಿದ್ಯಾಸಂಸ್ಥೆಯಲ್ಲಿ ಗೋಪೂಜೆ ಆಚರಣೆ

ಎಲಿಮಲೆ: ಇಲ್ಲಿನ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ದೀಪಾವಳಿಯ ಪ್ರಯುಕ್ತ ಗೋಪೂಜೆಯನ್ನು ಆ.30ರಂದು ಆಚರಿಸಲಾಯಿತು.

ಹಿಂದೂ ಸಂಸ್ಕೃತಿಯ ಪ್ರಕಾರ ಗೋವುಗಳ ಮಹತ್ವ ತಿಳಿಸುವಂತೆ, ಶಾಲೆಯಲ್ಲಿ ಗೋವನ್ನು ಜಳಕ ಮಾಡಿಸಿ, ಹೂಹಾರ ಹಾಕಿ, ಅರಸಿನ ಕುಂಕುಮ ಹಚ್ಚಿ ದೀಪಾರತಿ ಬೆಳಗಿಸಿ ಹಣ್ಣು – ಹಂಪಲುಗಳನ್ನು ನೀಡಲಾಯಿತು. ಶಾಲೆಯಲ್ಲಿ ಆಡಳಿತ ಮಂಡಳಿಯವರು, ಶಿಕ್ಷಕರು, ವಿದ್ಯಾರ್ಥಿಗಳು ಪ್ರದಕ್ಷಿಣೆ ಹಾಕಿ ಆಶೀರ್ವಾದ ಪಡೆದುಕೊಂಡರು.

ಆಂಗ್ಲ ಭಾಷಾ ಶಿಕ್ಷಕ ಅಚ್ಯುತ ಅಟ್ಲೂರು ದೀಪಾವಳಿ ಹಾಗೂ ಗೋ ಪೂಜಾ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯವರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಗದಾಧರ ಬಾಳುಗೋಡು ಸ್ವಾಗತಿಸಿ ವಂದಿಸಿದರು.