ಕೊಡಿಯಾಲ: ನಾದಿನಿಗೆ ಬೆಂಕಿ ಹಚ್ಚಿದ್ದ ಪ್ರಕರಣ| ಸುಟ್ಟ ಗಾಯದಿಂದ ಬಳಲುತ್ತಿದ್ದ ಮಹಿಳೆ ಸಾವು

ಬೆಳ್ಳಾರೆ: ಕೊಡಿಯಾಲ ಗ್ರಾಮದ ವೃದ್ಧರೊಬ್ಬರು ತನ್ನ ತಮ್ಮನ ಪತ್ನಿ ಮಲಗಿದ್ದಲ್ಲಿಗೆ ಹೋಗಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜಯಭಾರತಿ (56) ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಗುರುವಾರ ಸಂಭವವಿದೆ.

ಅ.12ರಂದು ರಾತ್ರಿ ಮನೆಯ ಕೋಣೆಯಲ್ಲಿ ಮಲಗಿದ್ದ ಜಯಭಾರತಿ ಮೇಲೆ ಪತಿಯ ಅಣ್ಣ ಶಂಕರ ನಾಯಕ್‌ ಕಿಟಕಿ ಮೂಲಕ ಪೆಟ್ರೋಲ್‌ ಎರಚಿ ಲೈಟರ್‌ ಮೂಲಕ ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಆರೋಪಿಯೂ ಗಾಯಗೊಂಡಿದ್ದ. ಮೃತ ಮಹಿಳೆಯ ಪತಿ ಜನಾರ್ದನ ನಾಯಕ್‌ ಒಂದೂ ವರೆ ವರ್ಷದ ಹಿಂದೆ ನಿಧನ ಹೊಂದಿದ್ದರು.

ಜಯಭಾರತಿ ಮತ್ತು ಅವರ ಪುತ್ರ ಆರೋಪಿಯ ಮನೆಯಲ್ಲೇ ವಾಸವಿದ್ದರು. ಮಹಿಳೆಯ ಪುತ್ರ ಇತ್ತೀಚೆಗಷ್ಟೇ ವಿದೇಶಕ್ಕೆ ಹೋದ ಕಾರಣ ಮನೆಯಲ್ಲಿ ಜಯಭಾರತಿ ಮತ್ತು ಶಂಕರ ನಾಯಕ್‌ ಮಾತ್ರ ಇದ್ದರು. ಪಾರ್ಶ್ವವಾಯುವಿಗೆ ಒಳಗಾಗಿ ಒಂದು ಕೈ ಮತ್ತು ಕಾಲಿನಲ್ಲಿ ಹಿಡಿತ ಕಳೆದುಕೊಂಡಿದ್ದ ಶಂಕರ ನಾಯಕ್‌ಗೆ ಮಹಿಳೆಯು ಊಟ, ಮದ್ದು ಕೊಡುತ್ತಿದ್ದರೂ ಆರೋಪಿಯು ವೃದ್ಧ ಜಯಭಾರತಿಯನ್ನು ಯಾವಾಗಲೂ ದ್ವೇಷಿಸುತ್ತಿದ್ದ ಎನ್ನಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.