ಸಂಪಾಜೆ: ಕಾಡುಪ್ರಾಣಿ ಬೇಟೆಯಾಡಿದವರ ಬಂಧನ

ಸಂಪಾಜೆ: ಇಲ್ಲಿನ ಸಂಪಾಜೆ ವಲಯ ರಕ್ಷಿತಾರಣ್ಯದಲ್ಲಿ ಕಾಡುಪ್ರಾಣಿ ಬೇಟೆಯಾಡಿದ ಓರ್ವನನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗೆ ಶೋಧ ನಡೆಸಲಾಗುತ್ತಿದೆ.

ಸಂಪಾಜೆ ವಲಯಾರಣ್ಯಾಧಿಕಾರಿ ಡಿಸ್ಸಿ ದೇಚಮ್ಮ ನೇತೃತ್ವದಲ್ಲಿ ಸಂಪಾಜೆ ಅರಣ್ಯಾಧಿಕಾರಿಗಳ ತಂಡ ಖಚಿತ ಮಾಹಿತಿ ಆಧರಿಸಿ ಮಡಿಕೇರಿ ತಾಲೂಕು ಪೆರಾಜೆ ಪೆರುಮುಂಡ ಗಂಗಾಧರ ಎಂಬವರನ್ನು ಬಂಧಿಸಿದೆ. ಈತನ ಮಗ ಜೀತನ್ ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ನಡೆಸಲಾಗುತ್ತಿದೆ.

ಕಾರ್ಯಾಚರಣೆಗೆ ಮಡಿಕೇರಿ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಬಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಹಿನ್ ಪಾಷಾ ಮಾರ್ಗದರ್ಶನ ನೀಡಿದ್ದರು.