ಸುಧೀರ್ ಹಾಲೆಮಜಲುರವರಿಗೆ ನುಡಿ ನಮನ

ಹಾಲೆಮಜಲು: ಇತ್ತೀಚೆಗೆ ನಿಧನರಾದ ನಾಲ್ಕುರು ಗ್ರಾಮದ ಹಾಲೆಮಜಲು ಮನೆ ದಿ. ಗಣಪಯ ಗೌಡ ಅವರ ಪುತ್ರ ಸುದೀರ್ ಹಾಲೆಮಜಲು ಇವರ ಉತ್ತರ ಕ್ರಿಯೆಯ ಸದ್ಗತಿ ಕಾರ್ಯಕ್ರಮದ ಪ್ರಯುಕ್ತ ನುಡಿ ನಮನ ಕಾರ್ಯಕ್ರಮ ಇಂದು ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.

ಕುಟುಂಬದ ಹಿರಿಯರಾದ ಶೇಷಪ್ಪ ಗೌಡರವರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನುಡಿ ನಮನವನ್ನು ಲೋಕೇಶ್ ಪಿರನ ಮನೆ ಸಲ್ಲಿಸಿದರ. ಕಾರ್ಯಕ್ರಮದಲ್ಲಿ ಮೃತರ ಕುಟುಂಬಸ್ಥರು ಬಂಧುಗಳು ಆಗಮಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದರು. ಕರ್ನಾಟಕ ಅರೆ ಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ ಮಾಜಿ ಸದಸ್ಯ ದಿನೇಶ್ ಹಾಲೆಮಜಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.