ಬಳ್ಪ: ಐತಿಹಾಸಿಕ ಬೋಗಾಯನಕೆರೆಯಲ್ಲಿ ಅ. 26 ರಂದು ಗಂಗಾರತಿ, ದೋಣಿ ವಿಹಾರ

ಬಳ್ಪ: ಗ್ರಾಮ ವಿಕಾಸ ಪ್ರತಿಷ್ಠಾನ ಬಳ್ಪ ಇದರ ಆಶ್ರಯದಲ್ಲಿ ಐತಿಹಾಸಿಕ ಬೋಗಾಯನಕೆರೆಯಲ್ಲಿ ಗಂಗಾರತಿ ಹಾಗೂ ದೋಣಿವಿಹಾರ ಕಾರ್ಯಕ್ರಮ ಅ. 26ರ ಶನಿವಾರದಂದು ನಡೆಯಲಿದೆ.

ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಗ್ರಾಮ ವಿಕಾಸ ಸಂಯೋಜಕ ಜಿತೇಂದ್ರ ಪ್ರಥಾಪ್ ನಗರ ಮುಖ್ಯ ಅತಿಥಿಯಾಗಿ ಭಾಗಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಮಲ್ಪೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ವಿಶೇಷವಾಗಿ ಸಂಜೆ ಗಂಟೆ 3ರಿಂದ ದೋಣಿ ವಿಹಾರ (ಬೋಟಿಂಗ್) ಪ್ರದರ್ಶನವು ನಡೆಯಲಿದೆ. ಸಂಜೆ ಗಂಟೆ 6:30ಕ್ಕೆ ಗಂಗಾ ಆರತಿ., ರಾತ್ರಿ ಗಂಟೆ 7:00ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ ಗಂಟೆ 8:00ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಪ್ರತಿ ಮನೆಯವರು ತಮ್ಮ ಮನೆಯಿಂದ ಬರುವಾಗ ಒಂದು ಕಲಶ, ನೀರು, ಹೂ, ದೀಪ, ಬತ್ತಿ, ಎಣ್ಣೆ, ಊದುಕಡ್ಡಿ ಸಹಿತ ಬರಬೇಕು