ಕೇರ್ಪಡ ದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ಪ್ರಾರಂಭ

ಸಮಗ್ರ ನ್ಯೂಸ್:ಕಡಬ ತಾಲೂಕಿನ ಎಡಮಂಗಲ ಗ್ರಾಮದ ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ ಈ ಸಭಾಂಗಣದಲ್ಲಿ ಧಾರ್ಮಿಕ ಮತ್ತು ಭಜನಾ ಶಿಕ್ಷಣ ಕೇಂದ್ರ ಕೇರ್ಪಡ ಇದರ ವತಿಯಿಂದ
ಧಾರ್ಮಿಕ ಶಿಕ್ಷಣ ತರಗತಿಯನ್ನು ಅ.20 ರಂದು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಲಯಗಳ ಸಂವರ್ಧನಾ ಸಮಿತಿ ಮಂಗಳೂರು ವಿಭಾಗ ಪ್ರಮುಕ್ ಶ್ರೀ ಕೇಶವಪ್ರಸಾದ್ ಮುಳಿಯ ಇವರು ವಹಿಸಿದ್ದರು.ನಿಕಟಪೂರ್ವ ಸಂಪನ್ಮೂಲ ವ್ಯಕ್ತಿಯಾಗಿ ಕೃಷ್ಣವೇಣಿ ಪ್ರಸಾದ್ ಮುಳಿಯ ಇವರು ದೀಪ ಬೆಳಗಿಸಿ ಶ್ರೀ ಮಹೋತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಹಾಗೂ ಶ್ರೀ ಹಸಂತಡ್ಕ ಮುರಳಿ ಕೃಷ್ಣ ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಆರಂಭಿಸಲಾಯಿತು.

ಕೃಷ್ಣವೇಣಿ ಪ್ರಸಾದ್ ಮುಳಿಯ ಇವರು ಕಥೆ, ಭಜನೆ ಹಾಗೂ ವಿವಿಧ ಚಟುವಟಿಕೆಗಳ ಮೂಲಕ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಗತಿ ನಡೆಸಿ ಮಾಹಿತಿಯನ್ನು ನೀಡಿದರು.ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ವೀಣಾ ಬಾಲಕೃಷ್ಣ ರವರು ಧಾರ್ಮಿಕ ಶಿಕ್ಷಣದ ಮಾಹಿತಿ ಹಾಗೂ ತಮ್ಮ ಕೇಂದ್ರದ ಮುಖೇನ ಬಿಡುಗಡೆಗೊಳಿಸಿರುವ ಧಾರ್ಮಿಕ ಪಠ್ಯಪುಸ್ತಕದ ಕುರಿತಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಧಾರ್ಮಿಕ ಮತ್ತು ಭಜನಾ ಶಿಕ್ಷಣ ಕೇಂದ್ರ ಕೇರ್ಪಡ ಇದರ ಸಂಚಾಲಕರಾದ ವಸಂತ ನಡುಬೈಲು , ಗೌರವಾಧ್ಯಕ್ಷರಾದ ಐತ್ತಪ್ಪ ಅಲೆಕ್ಕಾಡಿ ಮತ್ತು ವಸಂತ ಹುದೇರಿ , ಅಧ್ಯಕ್ಷರಾದ ಧ್ರುವಕುಮಾರ್ ಕೇರ್ಪಡ , ಶ್ರೀ ಕೇತ್ರ ಕೇರ್ಪಡದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರೂಪರಾಜ ರೈ , ಕೇಂದ್ರದ ಸಂಪನ್ಮೂಲ ವ್ಯಕ್ತಿಯಾದ ಸುಹಾಸ್ ಅಲೆಕ್ಕಾಡಿ , ನಿಂತಿಕಲ್ಲು ವಲಯ ಭಜನಾ ಪರಿಷತ್ ಅಧ್ಯಕ್ಷರಾದ ಪದ್ಮನಾಭ ಪೂದೆ , ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು , ಪೋಷಕರು
ಉಪಸ್ಥಿತರಿದ್ದರು.