ತಾಲೂಕಿನಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ| ಪತ್ರಿಕಾ ವಿತರಕ, ಛಾಯಾಗ್ರಾಹಕ ದಿವಾಕರ ಮುಂಡಾಜೆ ಇನ್ನಿಲ್ಲ

ಹರಿಹರ ಪಲ್ಲತಡ್ಕ: ಇಲ್ಲಿ ಪತ್ರಿಕಾ ವಿತರಕ ಹಾಗೂ ಛಾಯಾಗ್ರಾಹಕರಾಗಿರುವ ದಿವಾಕರ ಮುಂಡಾಜೆಯವರು ಇಂದು(ಅ16) ಬೆಳಿಗ್ಗೆ ತೀವ್ರ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದ ಘಟನೆ ವರದಿಯಾಗಿದೆ. ಇದರೊಂದಿಗೆ ಸುಳ್ಯ ತಾಲೂಕಿನಲ್ಲಿ ಹೃದಯಾಘಾತಕ್ಕೆ ಮೂರು ದಿನಗಳಲ್ಲಿ ಮೂರನೇ ಸಾವಾಗಿದೆ.

ದಿವಾಕರ ಅವರಿಗೆ ಸುಮಾರು 55 ವರ್ಷ ವಯಸ್ಸಾಗಿತ್ತು. ಇಂದು ಬೆಳಿಗ್ಗೆ ತನ್ನ ಅಂಗಡಿ ತೆರೆಯಲೆಂದು ತನ್ನ ಮನೆಯಿಂದ ಕಾರಲ್ಲಿ ಬರುತ್ತಿದ್ದ ದಿವಾಕರ ಮುಂಡಾಜೆಯವರಿಗೆ ಹರಿಹರ ಪಲ್ಲತಡ್ಕ ಪೇಟೆಯ ಬಳಿ ಹೃದಯಾಘಾತವಾಗಿ ಕಾರು ನಿಲ್ಲಿಸಿದರೆಂದೂ, ತೀವ್ರ ಹೃದಯಾಘಾತವಾಗಿದ್ದುದರಿಂದ ಕಾರಲ್ಲಿ ಕೂತಲ್ಲಿಯೇ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ವಿಷಯ ತಿಳಿದು ಊರವರು ಸೇರಿ ಡಾ. ಗಿರೀಶ್ ಅವರನ್ನು ಸ್ಥಳಕ್ಕೆ ಕರೆಸಿ ವೈದ್ಯಕೀಯ ತಪಾಸಣೆ ನಡೆಸಿದರು. ಆ ವೇಳೆ ಕೊನೆಯುಸಿರೆಳೆದಿರುವುದು ದೃಢಪಟ್ಟಿದೆ. ದಿವಾಕರರವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು. ಇವರು ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.