ಮರ್ಕಂಜ: ಆ್ಯಸಿಡ್ ಸೇವಿಸಿದ್ದ ವ್ಯಕ್ತಿ ಸಾವು

ಮರ್ಕಂಜ: ರಬ್ಬರ್‌ ಆ್ಯಸಿಡ್‌ ಸೇವಿಸಿ ಅಸೌಖ್ಯಕ್ಕೊಳಗಾಗಿದ್ದ ಮರ್ಕಂಜ ಗ್ರಾಮದ ಗೋಳಿಯಡ್ಕ ಶೇಷಪ್ಪ ಗೌಡ ಪಾಲ್ತಾಡು (70) ಅವರು ರವಿವಾರ ಮೃತಪಟ್ಟರು. ಶೇಷಪ್ಪ ಗೌಡರು ನಾಲ್ಕು ದಿನಗಳ ಹಿಂದೆ ರಬ್ಬರ್‌ ಆ್ಯಸಿಡ್‌ ಸೇವಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಬಳಿಕ ಅಲ್ಲಿಂದ ಸುಳ್ಯ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಅವರು ಮೃತಪಟ್ಟರು. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.