ಅಜ್ಜಾವರ: ಇಲ್ಲಿನ ಮೇನಾಲ ನಿವಾಸಿ, ರಿಕ್ಷಾ ಚಾಲಕ ಭಾಸ್ಕರ ರೈ (45) ಗುರುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲವು ವರ್ಷಗಳಿಂದ ಸುಳ್ಯದಲ್ಲಿ ಅಟೋ ಚಾಲಕರಾಗಿ ದುಡಿಯುತ್ತಿದ್ದ ಅವರು ಗುರುವಾರ ಬೆಳಗ್ಗೆ ಎಂದಿನಂತೆ ಸುಳ್ಯಕ್ಕೆ ಬಂದು ಕೆಲಸ ಮಾಡಿ ಮಧ್ಯಾಹ್ನ ಮನೆಗೆ ಹೋಗಿದ್ದರು.
ಮನೆಯ ಸಮೀಪದಲ್ಲೇ ರಿಕ್ಷಾ ನಿಲ್ಲಿಸಿ ತೋಟಕ್ಕೆ ತೆರಳಿದ್ದು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹುಡುಕಿದಾಗ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವಿವಾಹಿತರಾಗಿದ್ದ ಅವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಸುಳ್ಯ ಪೊಲೀಸರು ಸ್ಥಳ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.