ಪಂಜ: ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಪೂಜೆ ಅ. 3 ರಂದೂ ಆರಂಭ ಗೊಂಡಿದ್ದು, ಅ.12 ತನಕ ಪ್ರತಿ ದಿನ ಶ್ರೀ ದೇವರಿಗೆ ಮಹಾ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ.
ಭಜನಾ ಮಂಡಳಿಗಳಿಂದ ಸಂಜೆ ಗಂಟೆ 6ರಿಂದ ರಾತ್ರಿ 8.30ರ ವರೆಗೆ ಭಜನಾ ಸಂಕೀರ್ತನೆ, ಮತ್ತು ಅಷ್ಟಾವಾದನ ಕಾರ್ಯಕ್ರಮ ನಡೆಯುತ್ತಿದೆ. ಅ.9 ರಂದು ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾ ರಂಗದ ವತಿಯಿಂದ ಭಜನಾ ಸಂಕೀರ್ತನೆ. ಗಗನ್ ಪಂಜ ಬಳಗದವರಿಂದ ಚೆಂಡೆ ಮದ್ದಳೆ ಸೇವೆ ನಡೆಯಿತು. ಇಂದು ಕೇನ್ಯ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ವತಿಯಿಂದ ಭಜನಾ ಸಂಕೀರ್ತನೆ. ಪವನ್ ನರಿಯಂಗ ಕೇನ್ಯ ಇವರಿಂದ ತಬಲ ವಾದನ ಜರುಗಲಿದೆ. ಅ.11 ರಂದು ಪಂಜ ವನಿತ ಸಮಾಜ ವತಿಯಿಂದ ಭಜನಾ ಸಂಕೀರ್ತನೆ ಕುಮಾರಿ ಹೇಮಾ ಸ್ವಾತಿ ಕುರಿಯಾಜೆ ಮತ್ತು ತಂಡ ಇವರಿಂದ ಭರತನಾಟ್ಯ ಮತ್ತು ಯಕ್ಷಗಾನ ಭಾಗವತಿಕೆ ಜರುಗಲಿದೆ.
ಅ. 12 ರಂದು ಯುವ ಸ್ಫೂರ್ತಿ ಕಲ್ಮಡ್ಕ ಇವರಿಂದ ಭಜನಾ ಸಂಕೀರ್ತನೆ, ಚೈತ್ರಿಕ ಕೋಡಿಬೈಲು ರವರಿಂದ ಸಂಗೀತ ಸೇವೆ ಜರುಗಲಿದೆ ಎಂದು ಅಡಳಿತ ಮಂಡಳಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು ಹಾಗೂ ಸದಸ್ಯರು ತಿಳಿಸಿದ್ದಾರೆ.