ದುಲ್ಫುಕಾರ್ ಧಫ್ ಅಸೋಸಿಯೇಷನ್ ಅಧ್ಯರಾಗಿ ಸಿದ್ದೀಕ್ ಕೊಡಿಯಮ್ಮೆ ಆಯ್ಕೆ

ಗಾಂಧಿನಗರ ಅ. 1: ಕಾರಣಾಂತರದಿಂದ ಕಳೆದ ಕೆಲ ವರ್ಷಗಳಿಂದ ಸ್ಥಗಿತ ಗೊಂಡಿದ್ದ ಈ ಸಂಘದ ಚಟುವಟಿಕೆಗಳನ್ನು ಮತ್ತೆ ಸಕ್ರಿಯಗೊಳಿಸಲು ಸಂಘವನ್ನು ಪುನರ್ ಸಂಘಟಿಸಲ್ಪಟ್ಟು ಸಂಘದ ಮಾಜಿ ಅಧ್ಯಕ್ಷ ಹನಿಫ ಬಿ.ಎಂ. ಇವರ ಅಧ್ಯಕ್ಷತೆಯಲ್ಲಿ ಸುಳ್ಯದ ಅನ್ಸಾರ್ ಸಭಾಭವನದಲ್ಲಿ ಸಭೆ ಸೇರಿ ಈ ಕೆಳಗಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಸಿದ್ದೀಕ್ ಕೊಡಿಯಮ್ಮೆ, ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ನ್ಯಾಷನಲ್, ಕೋಶಾಧಿಕಾರಿಯಾಗಿ ಅಬ್ದುಲ್ ಕಲಾಂ ಸುಳ್ಯ,
ದಫ್ ತರಬೇತುದಾರರಾಗಿ ಅಬೂಬಕ್ಕರ್ ಸಂಭ್ರಮ, ಮತ್ತು ಸಿದ್ದೀಕ್ ಶುಕ್ರಿಯ, ಸರ್ವಾನುಮತದಿಂದ ಆಯ್ಕೆಯಾದರು.

ಸಭೆಯಲ್ಲಿ ದುಲ್ಫುಕರ್ ನ ಮಾಜಿ ಅಧ್ಯಕ್ಷ ಸಿದ್ದೀಕ್ ಕಟ್ಟೆಕ್ಕಾರ್, ಅಶ್ರಫ್ ನಾವೂರು, ಸಂಘದ ಸ್ಥಾಪಕ ಸದಸ್ಯ ಶರೀಫ್ ಫ್ರೂಟ್, ಮುಸ್ತಫ ನಾವೂರು, ಬಶೀರ್ ವೆಜ್, ಹಾಗೂ ಸುಮಾರು 20ರಷ್ಟು ಸ್ಥಾಪಕ ನಿರ್ದೇಶಕರುಗಳು ಸದಸ್ಯರುಗಳು ಈ ಸಭೆಯಲ್ಲಿ ಭಾಗವಹಿಸಿದರು.