ಸಮಗ್ರ ನ್ಯೂಸ್: ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಪ್ರೇಮ್ ಹಾಗೂ ಪತ್ನಿ ರಕ್ಷಿತಾ ಪ್ರೇಮ್ ಅವರು ಆ.3ರ ಗುರುವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ನವರಾತ್ರಿ ಪ್ರಯುಕ್ತ ಕರಾವಳಿ, ತುಳುನಾಡಿನಲ್ಲಿ ಆಚರಣೆಯಲ್ಲಿರುವ ಹುಲಿ ವೇಷ ಕುಣಿತವನ್ನು ಅವರು ವೀಕ್ಷಿಸಿದರು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಗುರುವಾರ (ಆ.3) ಆಗಮಿಸಿದ್ದ ಅವರು ಪೇಟೆಯಲ್ಲಿ ಹುಲಿ ವೇಷ ಕುಣಿತ ನಡೆಯುತ್ತಿರುವುದನ್ನು ಕಂಡು ಕಾರಿನಿಂದ ಇಳಿದು ಬಂದು ಹುಲಿ ಕುಣಿತವನ್ನು ಕೆಲ ಹೊತ್ತು ವೀಕ್ಷಿಸಿ, ತಂಡವನ್ನು ಪ್ರೋತ್ಸಾಹಿಸಿದರು. ಈ ವೇಳೆ ಛಾಯಗ್ರಾಹಕ ಸಂತೋಷ್ ಸುಬ್ರಹ್ಮಣ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.