ಹಾಲೆಮಜಲು:ಗಾಂಧಿ ಜಯಂತಿ ಪ್ರಯುಕ್ತ ‘ಆದರ್ಶ ಯೂತ್ ಕ್ಲಬ್’ ನಿಂದ ಸ್ವಚ್ಛತಾ ಕಾರ್ಯಕ್ರಮ

ಹಾಲೆಮಜಲು: ಆದರ್ಶ ಯೂತ್ ಕ್ಲಬ್ ಇದರ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಹಾಲೆಮಜಲು ಬಸ್ಸು ತಂಗ್ಗುದಾಣ ಪುಸ್ತಕಗೂಡು ಇದರ ಬಳಿಯಿಂದ ಹಿಡಿದು ರಸ್ತೆಯ ಇಕ್ಕೆಲಗಳಲ್ಲಿದ್ದ ಪ್ಲಾಸ್ಟಿಕ್ ಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷ ಆಕಾಷ್ ಕುಳ್ಳಂಪಾಡಿ, ಕಾರ್ಯದರ್ಶಿ ಪ್ರಜ್ವಲ್ ಕುಂಬಡ್ಕ, ಖಜಾಂಜಿ ದೀಕ್ಷಿತ್ ಹಾಲೆಮಜಲು, ಪಂಜ ಪಂಚಶ್ರಿ ಜೆಸಿಯ ಪೂರ್ವಾಧ್ಯಕ್ಷ ಶಿವಪ್ರಸಾದ ಹಾಲೆಮಜಲು, ಸುಳ್ಯ ಯುವಜನ ಸಯುಕ್ತ ಮಂಡಳಿಯ ನಿರ್ದೇಶಕ ದಿನೇಶ್ ಹಾಲೆಮಜಲು, ಎಸ್.ಕೆ.ಡಿ.ಆರ್.ಡಿ.ಪಿ. ಯ ಸೇವಾ ಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪಾಡಿ, ಸದಸ್ಯ ಕುಸುಮಾದರ ಗುಡ್ಡೆಮನೆ, ಘೋಷಿತ್ ನರಿಯೂರು, ಪ್ರಕಾಶ್ ಕುಳ್ಳಂಪಾಡಿ, ಪುನೀತ್ ಹಾಲೆಮಜಲು, ಕಾರ್ತಿಕ್ ಆಮೆ, ಆದರ್ಶ್ ಕುಳ್ಳಂಪಾಡಿ ಸೇರಿದಂತೆ ಮತ್ತಿತರ ಸದಸ್ಯರು ಸ್ವಚ್ಛತೆಯಲ್ಲಿ ಸಹಕರಿಸಿದರು.